ಸೋಮವಾರ, ಜನವರಿ 17, 2022
19 °C

‘ಗ್ರಾಮೀಣ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ‘ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಪ್ರತಿಭಾವಂತರಿದ್ದು, ರಸಪ್ರಶ್ನೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೆಚ್ಚಿನ ಕಾರ್ಯಕ್ರಮ ನಡೆಯಲಿ' ಎಂದು ಜೆಡಿಎಸ್‌ನ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾರಾಮಚಂದ್ರ ನಾಯಕ ಹೇಳಿದರು.

ತಾಲ್ಲೂಕಿನ ಚಾಗಭಾವಿಯ ಗಡ್ಡೆರಾಯನ ಕ್ಯಾಂಪ್ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತ‌ನಾಡಿದರು.

ವಿದ್ಯಾರ್ಥಿ ಮಟ್ಟದಲ್ಲಿಯೇ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ರೀತಿಯ ಪುಸ್ತಕ ಜೊತೆಗೆ ಓದುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ಪ್ರತಿಯೊಬ್ಬರೂ ಏನಾದರೂ ಸಾಧ್ಯ ಎಂದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹುಸೇನ್ ಭಾಷ ಮತ್ತು ಉಮಾ ಶಂಕರ ಗಬ್ಬೂರು ಅವರಿಗೆ ₹ 10001 ನಗದು, ದ್ವಿತೀಯ ಸ್ಥಾನ ಪಡೆದ ಸದ್ದಾಂ ಹುಸೇನ್‌ ಮತ್ತು ರಹೀಂ ಬಿ.ಗಣೇಕಲ್ ಅವರಿಗೆ ₹ 5001 ನಗದು ಹಾಗೂ ತೃತೀಯ ಸ್ಥಾನ ಪಡೆದ ಶಿವಗೇನಿ ಮತ್ತು ನನ್ನಯ್ಯ ಅರಕೇರಿ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಸಹನಾ ಮತ್ತು ಪ್ರೀಯ ಹರವಿ ಅವರಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕಗಳನ್ನು ನೀಡಲಾಯಿತು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ 70ಕ್ಕೂ ಸ್ಪರ್ಧಿಗಳು ಭಾಗವಹಿಸಿದ್ದರು‌.
ಕಾರ್ಯಕ್ರಮದಲ್ಲಿ ಉದಯ ಸಾಹುಕಾರ ಚಾಗಭಾವಿ, ರವಿ ಕುಮಾರ ಮಾತನಾಡಿದರು.

ಚಾಗಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಂದ್ರ, ಶಿಕ್ಷಕ ಮೊಹಮದ್, ಮುತ್ತಣ್ಣ, ಬಸವರಾಜ, ಚಾಗಭಾವಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸನಗೌಡ ಚಾಗಭಾವಿ, ಶಿವರಾಜ ನಾಯಕ ಅಂಗಡಿ, ಶಿವರಾಜಪ್ಪಗೌಡ ಮಾಲಿ ಪಾಟೀಲ್, ಬಸವರಾಜ ಬೂಮನಗುಂಡ, ಶಿಕ್ಷರಾದ ಬಲವಂತ, ರೇಖಾ ಕಾಟ್ರಳ್ಳಿ ಮೇಡಂ, ಶ್ರೀಶೈಲ ಹಿರೇಮಠ, ಪ್ರಶಾಂತ, ಎಸ್ಎಫ್ಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ, ಪ್ರತಾಪ್, ಶಾಲಾ ಹಳೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ
ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.