ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಟರಿ ಸಿಲ್ಕ್ ಸಂಸ್ಥೆ ಮುಡಿಗೆ ಹಲವು ಪ್ರಶಸ್ತಿ

Published 11 ಜುಲೈ 2024, 6:00 IST
Last Updated 11 ಜುಲೈ 2024, 6:00 IST
ಅಕ್ಷರ ಗಾತ್ರ

ರಾಮನಗರ: ‘ನಗರದ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿರುವ ಹಲವು ಸೇವಾ ಕಾರ್ಯಗಳಿಗೆ 22ಕ್ಕೂ ಹೆಚ್ಚು ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ನನ್ನ ಅವಧಿಯಲ್ಲಿ ನಡೆದ ಈ ಕೆಲಸ ಕಾರ್ಯಗಳಿಗೆ ಮೆಚ್ಚಿ ಇಷ್ಟೊಂದು ಪ್ರಶಸ್ತಿಗಳು ಬರಲು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರ ಕೂಡ ಕಾರಣ’ ಎಂದು ರೋಟರಿ ಸಿಲ್ಕ್ ಸಿಟಿಯ ನಿರ್ಗಮಿತ ಅಧ್ಯಕ್ಷ ಸುನೀಲ್ ಹೇಳಿದರು.

‘ಅತ್ಯುನ್ನತ ಪ್ಲಾಟಿನಂ ಅವಾರ್ಡ್, ಪರಿಸರ ಪ್ಲಾಟಿನಂ ಅವಾರ್ಡ್ ಸೇರಿದಂತೆ ಪರಿಸರ, ಮಹಿಳಾ ಮತ್ತು ಮಕ್ಕಳ ಸಬಲೀಕರಣ, ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿ, ಸಾರ್ವಜನಿಕ ಸೇವೆಗಳು, ಯುವಜನ ಸೇವೆಗಳಿಗೆ ವಿವಿಧ ಸೇವೆಗಳಿಗೆ ಪ್ರಶಸ್ತಿಗಳು ಲಭಿಸಿದೆ. ಮೇಕೆದಾಟು ಸಂಗಮದ ಜಿಎಸ್‍ಆರ್ ಆಗಿ ಗೋಪಾಲ್ ಅವರು ಹೊಸ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ. ಅವರಿಗೆ ರೋಟರಿ ಜಿಲ್ಲಾ 3191 ಕಡೆಯಿಂದ ನ್ಯೂ ಕ್ಲಬ್ ಅಡ್ವೈಸರ್ ಪ್ರಶಸ್ತಿ ಸಿಕ್ಕಿದೆ’ ಎಂದು ನಗರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲತಾ ಗೋಪಾಲ್ ಅವರಿಗೆ ಬೆಸ್ಟ್ ಅಡ್ವೈಸರ್ ಪಲ್ಸ್ ಪೊಲಿಯೋ ಅವಾರ್ಡ್, ಎ.ಜಿ. ರವಿಕುಮಾರ್ ಅವರಿಗೆ ಬೆಸ್ಟ್ ಗವರ್ನರ್ ಅವಾರ್ಡ್ ದೊರಕಿದೆ. ಕ್ಲಬ್ ತನ್ನ ಸಾಮಾಜಿಕ ಚಟುವಟಿಕೆಯ ಭಾಗವಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಸುಮಾರು 300 ಸೈಕಲ್ ವಿತರಣೆ ಮಾಡಿದ್ದೇವೆ. ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗೆ ಸೌಕರ್ಯ ಕಲ್ಪಿಸಿದ ಹಿನ್ನೆಲೆ ಕ್ಲಬ್‍ಗೆ ಪ್ರಶಸ್ತಿ ಲಭಿಸಿದೆ. ಪ್ರತಿ ವರ್ಷ ಈ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶ್ರೀಧರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಮು ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸದ್ಯದಲ್ಲೇ ಅವರ ಪದಗ್ರಹಣ ನಡೆಯಲಿದೆ. ಹೊಸ ಪದಾಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿ ಸಂಸ್ಥೆಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲಿ’ ಎಂದು ಶುಭ ಕೋರಿದರು.

ಸಂಸ್ಥೆಯ ಪದಾಧಿಕಾರಿಗಳಾದ ಗೋಪಾಲ್, ಪ್ರಭಾಕರ್, ರವಿ, ಎ.ಜಿ. ಸುರೇಶ್, ಸೋಮಣ್ಣ, ಶಿವರಾಜು, ಮಂಗಳಾ, ಸ್ವಪ್ನ, ಹೇಮಂತ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT