ರಾಮನಗರ: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿಗೆ ನಗರದ ಕಾಯಿಸೊಪ್ಪಿನಬೀದಿಯ ಎಂ. ಶರಣ್ ಆಯ್ಕೆಯಾಗಿದ್ದಾರೆ. ಬಿ.ಎಂ. ರಸ್ತೆಗೆ ಹೊಂದಿಕೊಂಡಂತಿರುವ ವಿನಾಯನಗರದಲ್ಲಿ ಶರಣ್ ಅವರು ಸೃಷ್ಟಿ ಶಿಲ್ಪಕಲಾ ಲೋಕ ಸ್ವಂತ ಉದ್ಯಮ ಹೊಂದಿದ್ದಾರೆ.

ಬಿಡದಿಯ ಜೋಗರದೊಡ್ಡಿಯಲ್ಲಿರುವ ಕೆಪಿಜೆ ಕರಕುಶಲ ತರಬೇತಿ ಕೇಂದ್ರದ ಜೊತೆಗೆ ಪುಣೆ ಮತ್ತು ತಮಿಳುನಾಡಿನಲ್ಲಿ ತರಬೇತಿ ಪಡೆದಿರುವ ಶರಣ್ ಅವರು, ಚನ್ನಪಟ್ಟಣದ ಶ್ರೀ ಗಂಗರಸ ಶಿಲ್ಪಕಲಾ ಶಿಕ್ಷಣ ಕೇಂದ್ರದಲ್ಲಿ ಬಿಎಫ್ಎ ಪದವಿಯಲ್ಲಿ ಚಿನ್ನದ ಪದಕ ಗಳಿಸಿದವರು. ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯ ಕಲಾ ವಿಭಾಗದಿಂದ ಎಂಎಫ್ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶರಣ್ ಅವರು ಕಲ್ಲಿನ ದೇವರ ಮೂರ್ತಿಗಳನ್ನು ಕೆತ್ತುವಲ್ಲಿ ನಿಸ್ಸೀಮರು. ಅವರ ಕೈಯಿಂದ ಅರಳಿರುವ ಹಲವು ದೇವರ ಮೂರ್ತಿಗಳು ವಿವಿಧ ದೇವಾಲಯಗಳಲ್ಲಿ ಪೂಜಿಸಲ್ಪಡುತ್ತಿವೆ. ಇವರು ಕೆತ್ತಿರುವ ಮೂರ್ತಿಗಳು ದೇಶ–ವಿದೇಶಗಳಲ್ಲೂ ಪೂಜೆಗೆ ಭಾಜನವಾಗುತ್ತಿವೆ. ಕಳೆದ 28 ವರ್ಷಗಳಿಂದ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿರುವ ಶರಣ್ ಅವರ ಕಲಾಸೇವೆ ಗುರುತಿಸಿ ವಿವಿಧ ಸಂಘ–ಸಂಸ್ಥೆಗಳು ಪ್ರಶಸ್ತಿ–ಪುರಸ್ಕಾರ ನೀಡಿ ಗೌರವಿಸಿದೆ. ಇದೀಗ, ಅಕಾಡೆಮಿಯ ‘ಶಿಲ್ಪಶ್ರಿ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.