ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾ ಬೆಟ್ಟದಲ್ಲಿನ ಅಕ್ರಮ ಒತ್ತುವರಿಗೆ ಕಂದಾಯ ಇಲಾಖೆ ತಡೆ

Published 22 ಸೆಪ್ಟೆಂಬರ್ 2023, 4:56 IST
Last Updated 22 ಸೆಪ್ಟೆಂಬರ್ 2023, 4:56 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಚಾರಿತ್ರಿಕ ಕಲ್ಯಾ ಬೆಟ್ಟದ ತಪ್ಪಲಿನಲ್ಲಿ ಅಪರಿಚಿತರು ಸಿಡಿಮದ್ದು ಸಿಡಿಸಿ, ಶಿಂಷಾನದಿಯ ಹಳ್ಳಕ್ಕೆ ಕಲ್ಲುಗಳನ್ನು ತುಂಬಿರುವ ಘಟನೆ ಗುರುವಾರ ನಡೆದಿದೆ.

ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸುರೇಂದ್ರ ಮೂರ್ತಿ ಮತ್ತು ಕಂದಾಯ ಅಧಿಕಾರಿಗಳಾದ ನಟರಾಜ, ಮಧು ಅವರು ಮತ್ತಷ್ಟು ಸಿಡಿಮದ್ದು ಸಿಡಿಸುವುದಕ್ಕೆ ತಡೆಯೊಡ್ಡಿದ್ದಾರೆ. ಸಂಬಂಧಿಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸುರೇಂದ್ರ ಮೂರ್ತಿ ತಿಳಿಸಿದ್ದಾರೆ. 

ಕಲ್ಯಾ ಬೆಟ್ಟದಲ್ಲಿ ಕಲಿಗಣನಾಥ ಗುಹಾಂತರ ದೇವಾಲಯವಿದೆ. ಅಲ್ಲದೇ, 18 ಶಿಲಾಶಾಸನಗಳೂ ಇವೆ. ಗುಹೆಯ ಹೊರಭಾಗದಲ್ಲಿ ಬಹುಭಾಷಾ ವಿಶಾರದ ಕವಿ ಪಾಲ್ಕುರಿಕೆ ಸೋಮನಾಥನ ಸಮಾಧಿ ಇದೆ. ಜೈನ ಯತಿಗಳು ನೆಲೆಸಿದ್ದ ಗುಹೆಗಳಿವೆ. ಶರಣೆ ಸರ್ವಶೀಲೆ ಚನ್ನಮ್ಮ ಅವರ ಗದ್ದುಗೆ ಇದೆ. ಬೆಟ್ಟದ ತಪ್ಪಲಿನಲ್ಲಿ  ಜೈನರ ಮಾನಸ್ತಂಭವಿದೆ.

ವೀರಗಲ್ಲುಗಳು, ಮಜ್ಜಣದ ಬಾವಿ, ವಿಜಯನಗರದ ಕಾಲದಲ್ಲಿ ನಿರ್ಮಿಸಿರುವ ಕೆರೆ, ಆಂಜನೇಯಸ್ವಾಮಿ, ಏಳುಮಂದ್ಯಕ್ಕದೇವಿ, ಗ್ರಾಮದೇವತೆ, ಬಸವಣ್ಣ ದೇವಾಲಯ, ಮಸೀದಿಗಳು ಗ್ರಾಮದೇವತೆಗಳು ಗುಡಿಗಳಿವೆ.

ಮಾಗಡಿ ತಾಲ್ಲೂಕಿನ ಕಲ್ಯಾಬೆಟ್ಟದ ತಪ್ಪಲಿನ ಬಂಡೆಗೆ ಅಕ್ರಮವಾಗಿ ಸಿಡಿಮದ್ದು ಬಳಸಿ ಸಿಡಿಸುತ್ತಿರುವುದು.
ಮಾಗಡಿ ತಾಲ್ಲೂಕಿನ ಕಲ್ಯಾಬೆಟ್ಟದ ತಪ್ಪಲಿನ ಬಂಡೆಗೆ ಅಕ್ರಮವಾಗಿ ಸಿಡಿಮದ್ದು ಬಳಸಿ ಸಿಡಿಸುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT