ಮಿನಿ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ

ಭಾನುವಾರ, ಮೇ 26, 2019
26 °C

ಮಿನಿ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ

Published:
Updated:
Prajavani

ಕನಕಪುರ: ನೂತನವಾಗಿ ನಿರ್ಮಿಸಿರುವ ತಾಲ್ಲೂಕ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ಒಳಗೊಂಡ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಮತ್ತು ಒಳಾಂಗಣ ಕೆಲಸ ಪೂರ್ಣಗೊಂಡಿರುವುದರಿಂದ ಮುಂದಿನ ಸೋಮವಾರ ಕಚೇರಿಗಳ ಸ್ಥಳಾಂತರ ಕಾರ್ಯ ಶುರು ಮಾಡುವುದಾಗಿ ತಹಶೀಲ್ದಾರ್‌ ಕೆ.ಕುನಾಲ್‌ ತಿಳಿಸಿದರು.

ನಗರದ ಹಳೇ ತಾಲ್ಲೂಕು ಕಚೇರಿ ಜಾಗದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿ ಕಚೇರಿ ಸ್ಥಳಾಂತರಕ್ಕಾಗಿ ಶುಕ್ರವಾರ ನಡೆಸಿದ ಹೋಮ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಅಬಕಾರಿ, ಶಿಶು ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಗ್ರಾಮೀಣ ಕುಡಿಯುವ ನೀರು ಇಲಾಖೆ, ಜಿಲ್ಲಾ ಪಂಚಾಯತ್‌ ಕಚೇರಿ, ಮೀನುಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಮಿನಿ ವಿಧಾನಸೌಧದಲ್ಲಿ ಜಾಗ ಕಲ್ಪಿಸಲಾಗಿದೆ.

ಕಟ್ಟಡದ ಒಳಾಂಗಣದ ಕೆಲಸ ಪೂರ್ಣಗೊಂಡಿರುವುದರಿಂದ ಸಂಬಂಧಪಟ್ಟ ಇಲಾಖೆ ಕಚೇರಿ ಸ್ಥಳಾಂತರಕ್ಕೆ ಸೋಮವಾರ ಚಾಲನೆ ನೀಡಲಾಗುವುದು. ಕಚೇರಿ ಸಂಪೂರ್ಣವಾಗಿ ಸ್ಥಳಾಂತರ ಆಗುವವರೆಗೂ ಈಗ ಇರುವ ಸ್ಥಳದಲ್ಲೇ ತಮ್ಮ ಕೆಲಸ ನಿರ್ವಹಿಸಲಿವೆ.

ಸಾರ್ವಜನಿಕರಿಗೆ ಯಾವುದೆ ರೀತಿ ತೊಂದರೆ ಆಗದಂತೆ ಸ್ಥಳಾಂತರ ಕೆಲಸ ಮಾಡುವುದಾಗಿ ಹಾಗೂ ತ್ವರಿತವಾಗಿ ಕಚೇರಿಗಳನ್ನು ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಕುನಾಲ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !