ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡನ್ ಬುಕ್ ವರ್ಲ್ಡ್ ರೆಕಾರ್ಡ್ಸ್: 1 ಕೆ.ಜಿ. ಎಳ್ಳು ಎಣಿಸಿದ ವಿದ್ಯಾರ್ಥಿನಿ

Last Updated 25 ಜನವರಿ 2021, 3:26 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಹೊಸೂರುದೊಡ್ಡಿ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಚ್.ಕೆ. ಸಂಧ್ಯಾಶ್ರೀ ಒಂದು ಕೆ.ಜಿ. ಕರಿಎಳ್ಳು ಎಣಿಕೆ ಮಾಡುವ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ.

ಗ್ರಾಮದ ರತ್ನಮ್ಮ, ಕುರಿಬೀರ ಹೆಗ್ಗಡೆ ದಂಪತಿಯ ಪುತ್ರಿ ಸಂಧ್ಯಾಶ್ರೀ ಒಂದು ಕಿಲೋ ಎಳ್ಳು ಎಣಿಕೆ ಮಾಡಿ ಅದರಲ್ಲಿ 3,78,615 ಎಳ್ಳು ಇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಬಿಡದಿಯ ಜ್ಞಾನ ವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಾಹಿತಿ ವಿಜಯ್ ರಾಂಪುರ ಹಾಗೂ ಸಿಗರೇಟ್ ಮೇಲೆ ಅಕ್ಷರ ಬರೆದು ದಾಖಲೆ ಮಾಡಿದ್ದ ದರ್ಶನ್ ಗೌಡ ಮತ್ತೀಕೆರೆ ಅವರ ಮಾರ್ಗದರ್ಶನ ಪಡೆದು ಇದನ್ನು ಮಾಡಿದ್ದಾಗಿ ತಿಳಿಸಿದ್ದಾರೆ.

ಎಳ್ಳು ಎಣಿಸಿ ಪ್ರತಿ ಪಾಕೆಟ್‌ಗೆ 500 ಎಳ್ಳು ಹಾಕಿ ಒಟ್ಟು 758 ಪಾಕೆಟ್‌ಗಳಲ್ಲಿ ಸಂಗ್ರಹಿಸಿ ಇಟ್ಟಿರುವ ಸಂಧ್ಯಾಶ್ರೀ, ಕೊನೆ ಪಾಕೆಟ್‌ಗೆ 615 ಎಳ್ಳು ಹಾಕಿದ್ದಾರೆ. ಎಣಿಕೆ ವಿಷಯಯಲ್ಲಿ ಯಾವುದೇ ಅನುಮಾನ ಬಾರದಂತೆ ಪಾಕೆಟ್ ಸಂಗ್ರಹಣೆ ಮಾಡಿದ್ದಾರೆ. ಇದರ ಜತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿರುವ ಅವರು, ವಿವಿಧ ಸಂಘ– ಸಂಸ್ಥೆಗಳು ಆಯೋಜಿಸುವ ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಎನ್‌ಸಿಸಿಯಲ್ಲಿಯೂ ಸಕ್ರಿಯರಾಗಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಹಲವು ಸಂಘ–ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT