ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ವಂಚಿತ ಷೇರುದಾರರ ಆಕ್ರೋಶ

ದೇಗುಲ ಮಠದ ನಿರ್ವಾಣೇಶ್ವರ ಕೋ–ಆಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿಗೆ ಚುನಾವಣೆ
Last Updated 16 ಏಪ್ರಿಲ್ 2021, 4:19 IST
ಅಕ್ಷರ ಗಾತ್ರ

ಕನಕಪುರ: ಇಲ್ಲಿನ ದೇಗುಲ ಮಠದ ನಿರ್ವಾಣೇಶ್ವರ ಕೋ-ಆಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ತಮಗೆ ಮತದಾನಕ್ಕೆ ಅವಕಾಶ ನೀಡದೆ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ‍ಷೇರುದಾರರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಕ್ಷಣಕಾಲ ಗೊಂದಲದ ವಾತಾವರಣ ತಲೆದೋರಿತ್ತು.

17 ನಿರ್ದೇಶಕರ ಆಯ್ಕೆಗಾಗಿ ದೇಗುಲ ಮಠದ ಆವರಣದಲ್ಲಿ ಚುನಾವಣೆ ನಡೆಯಿತು. ಮತದಾನಕ್ಕೆ ಅವಕಾಶ ಕೊಡದಿರುವುದು ಸದಸ್ಯರ ಕೋಪಕ್ಕೆ ಕಾರಣವಾಯಿತು.

ಬ್ಯಾಂಕಿನಲ್ಲಿ ಒಟ್ಟು 1,708 ಮಂದಿ ಸದಸ್ಯತ್ವ ಹೊಂದಿದ್ದು, ಈ ಪೈಕಿ 245 ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಿ ಉಳಿದವರನ್ನು ಅನರ್ಹಗೊಳಿಸಿದ್ದರು. ಷೇರುದಾರರು ಮತದಾನ ಮಾಡಲು ತೆರಳಿದಾಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದು ಅವರನ್ನು ಕೆರಳಿಸಿತು. ಆಗ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು.

ದೇಗುಲ ಮಠದ ಬ್ಯಾಂಕ್‌ ಎಂಬ ಕಾರಣಕ್ಕೆ ನಾವೆಲ್ಲಾ ಅಭಿಮಾನದಿಂದ ಷೇರು ಹಣ ಕಟ್ಟಿ ಸದಸ್ಯರಾಗಿದ್ದೇವೆ. ಆದರೆ, ನಮಗೆ ಯಾವುದೆ ನೋಟಿಸ್‌, ಮಾಹಿತಿ ನೀಡದೆ ನಮ್ಮ ಮತದಾನದ ಹಕ್ಕನ್ನು ಅನರ್ಹಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಯಾಂಕ್‌ ಪ್ರಾರಂಭಗೊಂಡ ದಿನದಿಂದಲೂ ಈವರೆಗೂ ಚುನಾವಣೆ ನಡೆಸದೆ 3 ಅವಧಿಗೂ ಅವಿರೋಧವಾಗಿ ಆಡಳಿತ ಮಂಡಳಿಯ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ಅವಿರೋಧ ಆಯ್ಕೆಗೆ ಕಸರತ್ತು ನಡೆಸಿ ವಿಫಲವಾಗಿದ್ದರಿಂದ ಅಂತಿಮವಾಗಿ ಚುನಾವಣೆ ನಡೆಸಲಾಯಿತು.

17 ನಿರ್ದೇಶಕರ ಪೈಕಿ 2 ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾಗಿದ್ದು ಶ್ರೀನಿವಾಸ್‌ ಟಿ. ಮತ್ತು ರಾಜು ಎಂ. ಎಂಬುವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 2 ಮಹಿಳಾ ಮೀಸಲು ಸ್ಥಾನಕ್ಕೆ ಅಕ್ಕಮಹದೇವಮ್ಮ, ನಾಗಮಣಿ, ವಿಜಯಾ ಮಂಜುನಾಥ್‌, ಸುಮಾ ಜಿ. ಕಣದಲ್ಲಿದ್ದಾರೆ.

ಸಾಮಾನ್ಯ ವರ್ಗದ 11 ಸ್ಥಾನಕ್ಕೆ ದೇಗುಲ ಮಠದ ಹಿರಿಯ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಕಿರಿಯ ಚನ್ನಬಸವ ಸ್ವಾಮೀಜಿ ಸೇರಿದಂತೆ ಸಂಪತ್‌ಕುಮಾರ್‌, ಕಬ್ಬಾಳೇಗೌಡ ಕೆ.ಎಸ್.‌, ಕುಮಾರ್‌ ಎ.ವಿ., ಚಂದ್ರಶೇಖರಯ್ಯ, ಚನ್ನವೀರಯ್ಯ, ಚಿಕ್ಕೆಂಪಯ್ಯ ಸಿ.ಎಂ., ದಕ್ಷಿಣಮೂರ್ತಿ, ನಾಗೇಂದ್ರಸ್ವಾಮಿ ಎಂ., ಪರಮೇಶಯ್ಯ, ಮಹದೇವಪ್ರಸಾದ್‌, ಮಹದೇವಪ್ರಸಾದ್‌ ಎ.ಎಸ್.‌, ಮಂಜುನಾಥ್‌ ಬಿ.ಜೆ., ಶಿವಕುಮಾರ್‌ ಕೆ.ಎಂ., ಶಿವಮೂರ್ತಿ ಎಚ್.‌, ಜಗದೀಶ್‌ಕುಮಾರ್‌ ಸಿ. ಚುನಾವಣಾ ಕಣದಲ್ಲಿದ್ದು ತಮಗೆ ಮತ ನೀಡುವಂತೆ ಮನವಿಮಾಡಿದರು.

ಕಾರ್ಯದರ್ಶಿ ಸ್ಪಷ್ಟನೆ: ಬ್ಯಾಂಕ್‌ನಲ್ಲಿ 1,708 ಷೇರುದಾರರು ಸದಸ್ಯತ್ವ ಹೊಂದಿದ್ದಾರೆ. ಮೂರು ವಾರ್ಷಿಕ ಮಹಾಸಭೆಗೆ ಗೈರುಹಾಜರಾದರೆ, ಖಾತೆಯಲ್ಲಿ ಕನಿಷ್ಠ ವ್ಯವಹಾರ ನಡೆಸದಿದ್ದರೆ, ಸಾಲ ಪಡೆದು ಸುಸ್ಥಿದಾರರಾದರೆ ಸಹಕಾರ ಇಲಾಖೆಯ ನಿಯಮಾನುಸಾರ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ಅಂತಹವರಿಗೆ ಮತದಾನದ ಹಕ್ಕು ಇರುವುದಿಲ್ಲ’ ಎಂದು ನಿರ್ವಾಣೇಶ್ವರ ಸಹಕಾರ ಸಂಘದ ಕಾರ್ಯದರ್ಶಿ ಚಂದನ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT