ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಕಾಲಿಗೆ ಬಿದ್ದ ಮಹಿಳೆಯರು: ಗದರಿದ ಸಂಸದ ಡಿ.ಕೆ. ಸುರೇಶ್‌

Published 14 ಜನವರಿ 2024, 15:55 IST
Last Updated 14 ಜನವರಿ 2024, 15:55 IST
ಅಕ್ಷರ ಗಾತ್ರ

ಹಾರೋಹಳ್ಳಿ (ರಾಮನಗರ): ‘ಬಹಳ ದಿನಗಳಿಂದ ಕೃಷಿ ಮಾಡುತ್ತಿದ್ದ ಜಮೀನನ್ನು ತೆರವುಗೊಳಿಸಿ ಅರಣ್ಯ ಇಲಾಖೆ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಅರಣ್ಯ ಇಲಾಖೆಯಿಂದ ನಮ್ಮ ಜಮೀನು ವಾಪಸ್‌ ಕೊಡಿಸಿ’ ಎಂದು ದಲಿತ ಮಹಿಳೆಯರು ಸಂಸದ ಡಿ.ಕೆ. ಸುರೇಶ್‌ ಅವರ ಕಾಲಿಗೆ ಬಿದ್ದು ಅಂಗಲಾಚಿದರು.

ಹಾರೋಹಳ್ಳಿಯ ಕೆಪಿಎಸ್ ಶಾಲೆ ಆವರಣದಲ್ಲಿ ಭಾನುವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಮರಳವಾಡಿ ಹೋಬಳಿಯ ಸಿಡಿ ದೇವರಹಳ್ಳಿ ಗ್ರಾಮದ ರೈತ ಮಹಿಳೆಯರು ‘ಹೆಣ ಹೊಳಲು ಜಾಗವಿಲ್ಲ ಜಮೀನು ಬಿಡಿಸಿಕೊಡಿ’ ಎಂದು ಮನವಿ ಮಾಡಿದರು. 

'ಏ ಸುಮ್ನಿರಿ...ನೀವೆಲ್ಲ ಜಮೀನು ಮಾರಾಟ ಮಾಡಿಕೊಂಡಿರುವುದು ನನಗೆ ಗೊತ್ತಿದೆ' ಎಂದು ಡಿ.ಕೆ. ಸುರೇಶ್‌ ಅವರು ಮಹಿಳೆಯರನ್ನು  ಗದರಿಸಿದರು. 

‘ದೇವರಹಳ್ಳಿಯಲ್ಲಿ ದಲಿತರು 30-40 ವರ್ಷದಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದ ಜಮೀನನ್ನು (ಸರ್ವೇ ಸಂಖ್ಯೆ104) ಏಕಾಏಕಿ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಕಂದಕ ತೋಡಿದ್ದಾರೆ. 94 ಜನರ ಹೆಸರಿನಲ್ಲಿ ಖಾತೆಯಿದ್ದು, ಕಂದಾಯ ಕೂಡ ಕಟ್ಟಲಾಗಿದೆ. ನೀವೆ  ನ್ಯಾಯ ಕೊಡಿಸಿ’ ಎಂದು ಮಹಿಳೆಯರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT