ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇತೋಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

Last Updated 6 ಏಪ್ರಿಲ್ 2017, 10:32 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಕೇತೋಹಳ್ಳಿ ಗ್ರಾಮದ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಜೆಡಿಎಸ್ ಮುಖಂಡ ವಿ. ನರಸಿಂಹಮೂರ್ತಿ ನೇತೃತ್ವದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಒಟ್ಟು 5 ಜೆಸಿಬಿಗಳು ಹಾಗೂ 10 ಲಾರಿಗಳು ಈ ಹೂಳೆತ್ತುವ ಕಾರ್ಯದಲ್ಲಿ ನಿರತವಾಗಿವೆ. ಇಲ್ಲಿಂದ ತೆಗೆದ ಮಣ್ಣನ್ನು ಸಮೀಪದ ರೈತರ ಜಮೀನುಗಳಿಗೆ ಹಾಕಲಾಗುತ್ತಿದೆ. ಇದರಿಂದ ಕೆರೆಯ ಪುನಶ್ಚೇತನದ ಜೊತೆಗೆ ಸುತ್ತಲಿನ ಜಮೀನುಗಳೂ ಫಲವತ್ತಾಗಲಿವೆ.

‘ಕುಮಾರಣ್ಣನ ಹುಡುಗರು ಸಂಘದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕೆ ತಗುಲುವ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದು ನರಸಿಂಹಮೂರ್ತಿ ತಿಳಿಸಿದರು.

‘ಸ್ಥಳೀಯರ ಸಹಕಾರದೊಂದಿಗೆ ಕೆರೆಯ ಏರಿಗೆ ಹಾನಿಯಾಗದಂತೆ ಒಳಗಿನ ಸಂಪೂರ್ಣ ಹೂಳನ್ನು ತೆಗೆದು ಈ ಕೆರೆಗೆ ಕಾಯಕಲ್ಪ ನೀಡಲಾಗುವುದು. ಈ ಕಾರ್ಯ ಪೂರ್ಣಗೊಂಡಲ್ಲಿ ಸುತ್ತಲಿನ ಹತ್ತು ಗ್ರಾಮಗಳ ಜನರ ಸಮಸ್ಯೆ ನೀಗಲಿದೆ. ಇದಕ್ಕೆ ತಾಲ್ಲೂಕು ಆಡಳಿತದಿಂದ ಅನುಮತಿಯನ್ನೂ ಪಡೆಯಲಾಗಿದೆ’ ಎಂದು ಅವರು ತಿಳಿಸಿದರು.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎನ್ನುವ ಉದ್ದೇಶದಿಂದ ಅವರ ಹೆಸರಿನ ಸಂಘಟನೆ ಮೂಲಕವೇ ಅನೇಕ ಜನಪರ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಮಾಜಿ ಅಧ್ಯಕ್ಷ ಕೆ. ಶಂಕರಯ್ಯ, ರಾಮನಗರ ಎಪಿಎಂಸಿ ಅಧ್ಯಕ್ಷ ಪುಟ್ಟರಂಗಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ರೇಣುಕಾಪ್ರಸಾದ್, ಜಯಕುಮಾರ್, ರಾಮಕೃಷ್ಣಯ್ಯ ಇತರರಿದ್ದರು.

**

ಉಕ್ಕಿದ ಜೀವಜಲ!

ಹತ್ತು ವರ್ಷಗಳಿಂದ ನೀರನ್ನು ಕಾಣದ ಕೇತೋಹಳ್ಳಿ ಕೆರೆಯ ಅಂಗಳದಲ್ಲಿ ಬುಧವಾರ ಹೂಳು ತೆಗೆಯುವ ಸಂದರ್ಭ 10–15 ಅಡಿ ಅಂತರದಲ್ಲಿಯೇ ನೀರು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿತು.1933ರಲ್ಲಿ ಮೈಸೂರು ಅರಸ ಜಯರಾಮರಾಜೇಂದ್ರ ಒಡೆಯರ್ , ದಿವಾನ್ ಮಿರ್ಜಾ ಇಸ್ಮಾಯಿಲ್‌ ಮಾರ್ಗದರ್ಶನದಲ್ಲಿ  ಮಾಯಗಾನಗಾನಹಳ್ಳಿಯ ಎಂ.ಬಿ. ಗುರುಲಿಂಗಯ್ಯ ಮತ್ತಿತರರ ಪರಿಶ್ರಮದಿಂದ ಈ ಕೆರೆ ನಿರ್ಮಾಣವಾಯಿತು ಎನ್ನಲಾಗಿದೆ.

ಸುಮಾರು 122 ಎಕರೆ ವಿಸ್ತೀರ್ಣದಲ್ಲಿನ ಈ ಕೆರೆಯು ಒತ್ತುವರಿಗೆ ಒಳಪಟ್ಟಿದ್ದು, 20 ಎಕರೆಗೂ ಹೆಚ್ಚು ಪ್ರದೇಶ ಅನ್ಯರ ಪಾಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT