ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೀಣವಾಗುತ್ತಿರುವ ಸುಸಂಸ್ಕೃತ ಅಭಿರುಚಿ’

ರಾಮನಗರ: ಯುವ ಸಮ್ಮೇಳನ ಮುಕ್ತಾಯ
Last Updated 17 ಡಿಸೆಂಬರ್ 2013, 8:47 IST
ಅಕ್ಷರ ಗಾತ್ರ

ರಾಮನಗರ: ‘ಕಲೆ, ಸಂಸ್ಕೃತಿ ಅಭಿವ್ಯಕ್ತಿ ಸಲು ಅವಕಾಶ ಮಾಡಿಕೊಡುವ ಯುವ ಸಮ್ಮೇಳನದಂತಹ ಕಾರ್ಯ ಕ್ರಮ ಗಳಲ್ಲಿ ಯುವ ಸಮುದಾಯ ಉತ್ಸಾಹದಿಂದ ಪಾಲ್ಗೊಳ್ಳಬೇಕು’ ಎಂದು ಕರ್ನಾಟಕ ಜಾನಪದ ಪರಿ ಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಜಾನಪದ ಲೋಕದಲ್ಲಿ ಏರ್ಪಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ ಹಾಗೂ ತರಬೇತಿ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

‘ಯುವಜನರ ಪ್ರತಿಭಾ ಕೌಶಲ ಅನಾವರಣಕ್ಕೆ ಯುವ ಸಮ್ಮೇಳನಗಳು ಸಹಕಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನಕ್ಕೆ ಅವಕಾಶ ಒದಗಿಸುತ್ತಿರುವ ಯುವ ಸಂಸ್ಕೃತಿ ಕಾರ್ಯಕ್ರಮಗಳಿಗೆ ಯುವ ಜನರು ಒಲವು ತೋರುತ್ತಿಲ್ಲ. ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಅವರು ವಿಷಾದಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಎಸ್. ಬಾಲಾಜಿ ಮಾತ ನಾಡಿ, ‘ರಾಮನಗರ ಜಿಲ್ಲೆ ಸಾಂಸ್ಕೃತಿಕ ವಾಗಿ ಶ್ರೀಮಂತವಾಗಿದೆ. ವಿಶೇಷವಾಗಿ ಇಲ್ಲಿನ ಜನಪದ ಕಲೆ, ಸಂಸ್ಕೃತಿ ಗಮನ ಸೆಳೆಯುವಂತಿದೆ. ವಿಭಿನ್ನ ಕಲಾ ಪ್ರಕಾರ ಗಳ ನೆಲೆಯಾಗಿರುವ ಜಿಲ್ಲೆಯಲ್ಲಿ ಯುವ ಕಲಾತಂಡಗಳು ಯುವ ಸಮ್ಮೇಳ ನನಂತಹ ಕಾರ್ಯಕ್ರಮದಲ್ಲಿ ಸಕ್ರಿಯ ವಾಗಿ ತೊಡಗಿಕೊಳ್ಳಬೇಕು. ಇದ ರಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಅವಕಾಶ ಪಡೆ ಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಗೌಡ ಮಾತನಾಡಿ, ‘ಯುವ ಜನರನ್ನು ಕ್ರಿಯಾ ಶೀಲರನ್ನಾಗಿಸುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ.

ಈ ಹಿಂದೆ ವಿವೇಕಾನಂದರ ಜಯಂತಿ ಸಂದರ್ಭದಲ್ಲಿ ಒಂದೆಡೆ ಸಂಘಟಿಸುವ ನಿಟ್ಟಿನಲ್ಲಿ ಯುವ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸ ಲಾಗಿದೆ. ಯುವ ಸಬಲೀಕರಣಕ್ಕಾಗಿಯೇ ಪ್ರತ್ಯೇಕ ಇಲಾಖೆಯೂ ಇದೆ. ಜಿಲ್ಲೆಯ ಯುವ ಸಂಘ ಸಂಸ್ಥೆಗಳು ನಿರುತ್ಸಾಹ ಬಿಟ್ಟು ಸಾಂಸ್ಕೃತಿಕ ಚಟು ವಟಿಕೆಗಳಿಗೆ ಆಸಕ್ತಿ ತೋರಬೇಕು’ ಎಂದು ತಿಳಿಸಿದರು.

ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜ್, ತೋಟ ಗಾರಿಕೆ ಇಲಾಖೆಯ ಸಹಾಯಕ ನಿರ್ದೇ ಶಕ ನಾಗರಾಜ್, ರಂಗನಿರ್ದೇಶಕ ಬೈರ್ನಳ್ಳಿ ಶಿವರಾಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT