ರಾಜ್ಯ ಒಕ್ಕೂಟದ ಅಧ್ಯಕ್ಷರಾಗಿ ತಗಡೂರಚಾರಿ ಆಯ್ಕೆ

7

ರಾಜ್ಯ ಒಕ್ಕೂಟದ ಅಧ್ಯಕ್ಷರಾಗಿ ತಗಡೂರಚಾರಿ ಆಯ್ಕೆ

Published:
Updated:
Deccan Herald

ಕನಕಪುರ: ‘ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ರಾಜ್ಯದ ಜಿಲ್ಲಾ ಆಯ್ಕೆ ಸಮಿತಿ ಸದಸ್ಯರ ರಾಜ್ಯ ಒಕ್ಕೂಟ’ವನ್ನು ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಕನಕಪುರದ ಎಚ್‌.ಇ.ತಗಡೂರಚಾರಿ ಆಯ್ಕೆಗೊಂಡಿದ್ದಾರೆ.

ನೂತನವಾಗಿ ಪ್ರಾರಂಭಗೊಂಡಿರುವ ಸಮಿತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಯು ಬೆಂಗಳೂರಿನ ವಸಂತ ನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ 30 ಜಿಲ್ಲೆಗಳ ನಾಮ ನಿರ್ದೇಶಕ ಸದಸ್ಯರು ಪಾಲ್ಗೊಂಡಿದ್ದರು.‌

ಅಧ್ಯಕ್ಷರಾಗಿ ಎಚ್‌.ಇ. ತಗಡೂರಚಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಿ.ಶೇಖರ್‌, ಉಪಾಧ್ಯಕ್ಷರಾಗಿ ಎಸ್‌. ನಾಗೇಂದ್ರಚಾರ್, ಶಿವಮೊಗ್ಗ ಮಂಜುನಾಥ್‌, ಖಜಾಂಚಿಯಾಗಿ ಎಂ.ಬಿ.ಲೀಲಾವತಿ, ಸಂಘಟನಾ ಕಾರ್ಯದರ್ಶಿ ನಾಗರಾಜಚಾರಿ, ರಾಜ್ಯ ಸಂಚಾಲಕರಾಗಿ ಎಂ. ಮಂಜುನಾಥ್‌, ಸಲಹೆಗಾರರಾಗಿ ದೇವೇಂದ್ರಪ್ಪ, ಶಿವರಾಜ್‌, ಬಾಬುರಾವ್‌ ಆಯ್ಕೆಗೊಂಡಿದ್ದಾರೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವೈ.ಬಿ. ಅರ್ಚನಾ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕಿ ದೀಪಶ್ರೀ ಕೆ., ನಿಗಮದ ಮಾಜಿ ಅಧ್ಯಕ್ಷ ಎನ್‌. ನಂದಕುಮಾರ್‌, ರಾಜ್ಯ ನಿರ್ದೇಶಕರು ಹಾಗೂ ಜಿಲ್ಲಾ ನಿರ್ದೇಶಕರು ಶುಭ ಕೋರಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !