ಗುರುವಾರ , ನವೆಂಬರ್ 21, 2019
21 °C

ಪ್ರತ್ಯೇಕ ಜಿಲ್ಲೆ; ಪೂರ್ವ ಭಾವಿ ಸಭೆ

Published:
Updated:
Prajavani

ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆ ಕುರಿತು ವ್ಯಾಪಾರಸ್ಥರ ಪೂರ್ವಭಾವಿ ಸಭೆ ಈಚೆಗೆ ನಡೆಯಿತು. ಸಭೆಯಲ್ಲಿ ಅನೇಕ ವ್ಯಾಪಾರಸ್ಥರು ಮಾತನಾಡಿ ಪ್ರತ್ಯೇಕ ಜಿಲ್ಲೆಗೆ ಬೆಂಬಲ ವ್ಯಕ್ತಪಡಿಸಿದರು.

ವ್ಯಾಪಾರಿಗಳಾದ ಅಜಿತ್ ಧನಶೆಟ್ಟಿ, ಮುತ್ತು ದೇಸಾಯಿ, ಜಗದೀಶ ಕ್ಷತ್ರಿ ಮಾತನಾಡಿ, ‘ಇಂಡಿ ಕೇಂದ್ರ ಸ್ಥಾನವಿದ್ದು ಹೆಚ್ಚು ಜನಸಂಖ್ಯೆ ಹೊಂದಿರುವ ತಾಲ್ಲೂಕಾಗಿದೆ. ಎಲ್ಲರೂ ಸೇರಿ ಶಾಸಕರಿಗೆ ಬಲ ತುಂಬುವ ಮೂಲಕ ಹೋರಾಟಕ್ಕೆ ಸದಾ ಸಿದ್ಧರಾಗಿರೋಣ. ಜಿಲ್ಲೆಯಾಗಲು ವ್ಯಾಪಾರಸ್ಥರು ಒಂದೆಡೆ ಸೇರಿ ಇದಕ್ಕೆ ಮತ್ತೆ ಏನಾದರೂ ಪೂರಕ ವಾತಾವರಣ ಬೇಕಾದರೆ ಸಹಾಯ, ಸಹಕಾರ ನೀಡಿ ಜಿಲ್ಲೆ ಮಾಡಲು ಸರ್ಕಾರಕ್ಕೆ ವ್ಯಾಪಾರಸ್ಥರ ಧ್ವನಿ ಮುಟ್ಟಿಸುವ ಕಾರ್ಯವಾಗಬೇಕಿದೆ. ಅಭಿವೃದ್ಧಿಗೆ ಪಕ್ಷಭೇದ ಮರೆತು ಸದಾ ನಿಮ್ಮೊಂದಿಗೆ ಇರುತ್ತೇವೆ’ ಎಂದು ಒಕ್ಕೊರಲಿನಿಂದ ಹೇಳಿದರು.

‘ವಿದ್ಯಾ ಸಂಸ್ಥೆಗಳಿಲ್ಲದೆ ಈ ತಾಲ್ಲೂಕು ಶೈಕ್ಷಣಿಕವಾಗಿ ವಂಚಿತವಾಗಿತ್ತು. ಯಶವಂತರಾಗೌಡ ಅವರು ಶಾಸಕರಾದ ನಂತರ ಸರ್ಕಾರದಿಂದ ಕೆಲವೊಂದು ಶಿಕ್ಷಣ ಸಂಸ್ಥೆಗಳನ್ನು ಮಂಜೂರು ಮಾಡಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆ ಮಾಡಿದರೆ ಇನ್ನೂ ಹೆಚ್ಚಿನ ವೃತ್ತಿಪರ, ತಾಂತ್ರಿಕ ಕಾಲೇಜುಗಳ ಸ್ಥಾಪನೆ ಆಗಿ ಶೈಕ್ಷಣಿಕ ಕ್ರಾಂತಿಯಾಗುತ್ತದೆ. ಜಿಲ್ಲೆಯಾಗುವುದರಿಂದ ಬಡ ವಿದ್ಯಾರ್ಥಿಗಳಿಗೆ ಬೇರೆ ಕಡೆ ಶಿಕ್ಷಣ ಪಡೆಯಲು ಹೋಗುವುದು ತಪ್ಪುತ್ತದೆ. ನಮ್ಮ ತಾಲ್ಲೂಕಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳಿವೆ. ದೂರದೃಷ್ಟಿ ಹೊಂದಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಜಿಲ್ಲೆ ಮಾಡಬೇಕು ಎಂಬ ಬೇಡಿಕೆಗೆ ಸ್ವಾಗತವಿದೆ’ ಎಂದು ಉದ್ದಿಮೆದಾರ ಅಂತೋಜೈನ್ ಹೇಳಿದರು.

ಅಡತ್ ವ್ಯಾಪಾರಸ್ಥರಾದ ಮಲ್ಲನಗೌಡ ಬಿರಾದಾರ, ಉದ್ದಿಮೆದಾರ ರಮೇಶ ಗುತ್ತೆದಾರ, ವ್ಯಾಪರಸ್ಥರಾದ ಸಂಗಮೇಶ ಕಕ್ಕಳಮೇಲಿ, ಪ್ರದೀಪ ಮುರಗುಂಡಿ, ರಾಜು ಹದಗಲ್, ಮುತ್ತು ದೇಸಾಯಿ, ಸಂದೀಪ ಧನಶೆಟ್ಟಿ, ಮುನ್ನಾ ಸೌದಾಗರ, ಚಂದು ದೇವರ, ಮುನ್ನಾ ಹಳ್ಳಿ, ಮಹಾವೀರ ಧನಶೆಟ್ಟಿ, ಮಹಾವೀರ ವರ್ಧಮಾನ, ಸಂತೋಷ ಕೋಟಿ, ಧನರಾಜ ಮುಜಗೊಂಡ ಇದ್ದರು.

ಪ್ರತಿಕ್ರಿಯಿಸಿ (+)