ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‍ಟಿ–2 ವಿದ್ಯುತ್‌ ಬಳಕೆಗೆ ಅನುಮತಿ ನೀಡಿ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ
Last Updated 21 ಸೆಪ್ಟೆಂಬರ್ 2021, 4:35 IST
ಅಕ್ಷರ ಗಾತ್ರ

ಶಿವಮೊಗ್ಗ: ಅಡಿಕೆ ಸುಲಿಯುವ ಯಂತ್ರಕ್ಕೆ ಮನೆಯ ಮೀಟರ್‌ಗಳಿಂದಲೇ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ರೈಲ್ವೆ ನಿಲ್ದಾಣದ ಬಳಿಯ ಕೆಇಬಿ ಕಚೇರಿ ಎದುರು ಪ್ರತಿಭಟನೆನಡೆಸಲಾಯಿತು.

ರೈತರು ವರ್ಷದಲ್ಲಿ ಮೂರು ತಿಂಗಳು ಮಾತ್ರ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸುತ್ತಾರೆ. ಮನೆಯ ಮೀಟರ್‌ಗಳಿಂದಲೇ ವಿದ್ಯುತ್ ಉಪಯೋಗಿಸಿ ಎಲ್‍ಟಿ–2 ದರಪಟ್ಟಿಯಂತೆ ಬಿಲ್ ಪಾವತಿ ಮಾಡುತ್ತಿದ್ದಾರೆ. ಈಗ ವಿದ್ಯುತ್ ಇಲಾಖೆಯವರು ಕೈಗಾರಿಕೆಗಳಿಗೆ ಉಪಯೋಗಿಸುವ ಎಲ್‍ಟಿ–5 ವಿದ್ಯುತ್ ಸಂಪರ್ಕ ಪಡೆದು ಅಡಿಕೆ ಸುಲಿಯುವ ಯಂತ್ರ ಉಪಯೋಗಿಸಬೇಕು ಎಂದು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಹೊಸ ದರ ಪಟ್ಟಿ ಪ್ರಕಾರ ಇನ್ನೂ 9 ತಿಂಗಳು ರೈತರು ವಿದ್ಯುತ್ ಉಪಯೋಗಿಸದೇ ಇದ್ದರೂ ಕನಿಷ್ಠ ಶುಲ್ಕ ಕಟ್ಟಬೇಕಾಗುತ್ತದೆ. ಆದ್ದರಿಂದ ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‍ಟಿ–5 ಬದಲಾಗಿ ಎಲ್‍ಟಿ–2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಸುಟ್ಟುಹೋದ ಟಿ.ಸಿ.ಗಳನ್ನು ಕಾನೂನು ಪ್ರಕಾರ 72 ಗಂಟೆಯೊಳಗೆ ಬದಲಾವಣೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಪ್ರಮುಖರಾದ ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ರಾಮಚಂದ್ರ, ಹಿಟ್ಟೂರು ರಾಜು,
ಸಿ. ಚಂದ್ರಪ್ಪ, ರಾಜಪ್ಪ, ಎ. ಯೋಗೇಶ್, ಜ್ಞಾನೇಶ್, ಈರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT