ಶನಿವಾರ, ಜನವರಿ 28, 2023
18 °C

ಕಳ್ಳನ ಬಂಧನ: ₹ 7.77 ಲಕ್ಷ ಮೌಲ್ಯದ ವಸ್ತು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಇಲ್ಲಿನ ದೊಡ್ಡಪೇಟೆ ಠಾಣೆ ಪೊಲೀಸರು ಸೋಮವಾರ 8 ಮನೆಗಳಲ್ಲಿ ನಡೆದಿದ್ದ ಕಳವಿನ ಪ್ರಕರಣದ ಆರೋಪಿಯನ್ನು ಬಂಧಿಸಿ  ₹ 7,77,950  ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಣ್ಣಾ ನಗರ 1ನೇ ಕ್ರಾಸ್‌ ನಿವಾಸಿ ಡಿ. ಸದ್ದಾಂ (31) ಬಂಧಿತ ಆರೋಪಿ. ಅಣ್ಣಾ ನಗರದಲ್ಲಿ ಡಿ. 2ರಂದು ಮನೆಯೊಂದರ ಎಗ್ಸಾಸ್ಟರ್ ಫ್ಯಾನ್ ಮುರಿದು ಒಳಗೆ ಪ್ರವೇಶಿಸಿ ಈತ ಕಳವು ಮಾಡಿದ್ದ. ಆ ಬಗ್ಗೆ ಮನೆಯ ಮಾಲೀಕರು ಇಲ್ಲಿನ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು.  ಕಳ್ಳರು ಮನೆಯೊಳಗೆ ಬಂದು ಬೀರುವಿನಲ್ಲಿದ್ದ ನಗದು, ಟಿ.ವಿ, ಮೊಬೈಲ್ ಫೋನ್‌ ಮತ್ತು ವಾಚ್‌ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಂಜನ್ ಕುಮಾರ್‌ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ ಒಟ್ಟು 8 ಮನೆಗಳ ಕಳವಿನ  ಪ್ರಕರಣಗಳಿಗೆ ಸಂಬಂಧಿಸಿದ ₹ 7,22,500 ಮೌಲ್ಯದ 144.50 ಗ್ರಾಂ ಚಿನ್ನದ ಆಭರಣ‌, ₹ 21,700 ಮೌಲ್ಯದ 310 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿ.ವಿ. ಸೇರಿದಂತೆ ಒಟ್ಟು ₹ 7,77,950  ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.