ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮಗು ಮಾರಾಟ: ನಾಲ್ವರ ಬಂಧನ

Last Updated 30 ಜುಲೈ 2020, 14:44 IST
ಅಕ್ಷರ ಗಾತ್ರ

ಶಿವಮೊಗ್ಗ: ಹಣಕ್ಕಾಗಿ 15 ದಿನಗಳ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಇಲ್ಲಿನ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ಟಿಪ್ಪುನಗರದ ಶೈಲಾ, ಸುಮಾ, ತುಳಸಿ ಹಾಗೂ ಷಣ್ಮುಖ ಬಂಧಿತ ಆರೋಪಿಗಳು.

ಈ ಮಗು ಆರೋಪಿಗಳಲ್ಲಿ ಒಬ್ಬರಾದ ಸುಮಾ ಅವರ ಸಂಬಂಧಿಕರದು. ಬ್ಯೂಟಿ ಪಾರ್ಲರ್‌ ಮಹಿಳೆ ಸಹಾಯದಿಂದ ₨ 1.50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಮಕ್ಕಳ ಸಹಾಯವಾಣಿಗೆ ಬಂದ ಕರೆ ಆಧರಿಸಿ ಅದೇ ಸಮಯಕ್ಕೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಮಗುವಿನ ತಾಯಿ ಮಾನಸಿಕ‌‌ ಅಸ್ವಸ್ಥೆಯಾಗಿರುವ ಕಾರಣ ಮಗು ಸಾಕಲು ಕಷ್ಟವಾಗುತ್ತದೆ. ಜತೆಗೆ, ಕಿತ್ತು ತಿನ್ನುವ ಬಡತನವಿದೆ. ಹಾಗಾಗಿ, ಮಾರಾಟ ಮಾಡಲು ಅನುಮತಿ ನೀಡಿರುವುದಾಗಿ ಮಗು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಮೂವರು ಮಹಿಳೆಯರು ಹಾಗೂ ಮಗುವನ್ನು ಸುರಭಿ ಕೇಂದ್ರದಲ್ಲಿ ಇರಿಸಲಾಗಿದೆ. ಹಿಂದೆಯೂ ಈ ತಂಡ ಮಕ್ಕಳನ್ನು ಮಾರಾಟ ಮಾಡಿರುವ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT