ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

Published 20 ಜೂನ್ 2023, 15:55 IST
Last Updated 20 ಜೂನ್ 2023, 15:55 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಮೀಸಲಾತಿ ಮಂಗಳವಾರ ಅಂತಿಮಗೊಂಡಿತು.

ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಿತು.

2020ರಲ್ಲಿ 5 ವರ್ಷಗಳ ಅವಧಿಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು, 30 ತಿಂಗಳಿಗೆ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಸದ್ಯ ಎಲ್ಲಾ ಗ್ರಾಮ ಪಂಚಾಯಿತಿಗಳ ಆಡಳಿತದ ಅವಧಿ ಪೂರ್ಣಗೊಳ್ಳಲಿದ್ದು, ಉಳಿದ 30 ತಿಂಗಳಿಗೆ ಮೀಸಲಾತಿ ಪ್ರಕಟಗೊಂಡಿದೆ.

38 ಗ್ರಾಮ ಪಂಚಾಯಿತಿಗಳಲ್ಲಿ 2 ಪರಿಶಿಷ್ಟ ಜಾತಿ (ಎಸ್‌ಸಿ), 10 ಬಿಸಿಎಂ- ‘ಎ’, 3 ಬಿಸಿಎಂ- ‘ಬಿ’, 23 ಸಾಮಾನ್ಯ ಮೀಸಲಾತಿ ವರ್ಗೀಕರಣದ ಆಧಾರದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು. ಇದರಲ್ಲಿ 19 ಮಹಿಳಾ ಮೀಸಲಾತಿ ಘೋಷಿಸಲಾಯಿತು.

ಅರಳಸುರಳಿ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅರೇಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಆಗುಂಬೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆರಗ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕನ್ನಂಗಿ:  ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ), ಕುಡುಮಲ್ಲಿಗೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಕೋಣಂದೂರು ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಗುಡ್ಡೇಕೊಪ್ಪ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ), ರಾಮಕೃಷ್ಣಪುರ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ತ್ರಿಯಂಬಕಪುರ: ಅಧ್ಯಕ್ಷ  (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ತೂದೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’), ದೇಮ್ಲಾಪುರ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ).

ದೇವಂಗಿ: ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಾಲೂರು ಕೊಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ನೆರಟೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ನೊಣಬೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬಸವಾನಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ-ಎ), ಬಿದರಗೋಡು: ಅಧ್ಯಕ್ಷ (ಬಿಸಿಎಂ-ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಬೆಜ್ಜವಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಬಿ’), ಬಾಂಡ್ಯಕುಕ್ಕೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ-‘ಎ’ ಮಹಿಳೆ), ಮಂಡಗದ್ದೆ: ಅಧ್ಯಕ್ಷ  (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ಮೇಲಿನ ಕುರುವಳ್ಳಿ: ಅಧ್ಯಕ್ಷ (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮುಳುಬಾಗಿಲು ಅಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಮೇಗರವಳ್ಳಿ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೇಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲ್ಗಡಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲೂರು: ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’)

ಶಿಂಗನಬಿದರೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಶೇಡ್ಗಾರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಣಗೆರೆ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಾದಿಗಲ್ಲು: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹಾರೋಗೊಳಿಗೆ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುಂಚದಕಟ್ಟೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), ಹೆಗ್ಗೋಡು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಹೆದ್ದೂರು: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊದಲಾ ಅರಳಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), ಹೊನ್ನೆತಾಳು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊಸಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)

ಮೀಸಲಾತಿ ಪ್ರಕ್ರೀಯೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಸ್.‌ ಬಿರಾದರ್‌, ಪ್ರೋಬೇಷನರಿ ಐಎಎಸ್‌ ಅಧಿಕಾರಿ ದಲ್ಜಿತ್‌ ಕುಮಾರ್, ತಹಶೀಲ್ದಾರ್‌ ಅಮೃತ್‌ ಅತ್ರೇಶ್‌, ಇಒ ಶೈಲಾ ಎನ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT