ಶುಕ್ರವಾರ, ಮಾರ್ಚ್ 31, 2023
25 °C

ಶಿವಮೊಗ್ಗ ನಗರ ಟಿಕೆಟ್‌, ಹೈಕಮಾಂಡ್‌ಗೆ ಮನವಿ: ಆಯನೂರು ಮಂಜುನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಈಶ್ವರಪ್ಪ ಚಾಲಕನ (ಶಾಸಕ) ಸ್ಥಾನದಲ್ಲಿ ಸುದೀರ್ಘ ಅವಧಿಯಿಂದ ಇದ್ದಾರೆ. ಈಗ ಚಾಲನೆ ಮಾಡಲು ನನಗೂ ಮನಸ್ಸಾಗಿದೆ. ನನಗೂ ಡ್ರೈವರ್‌ ಸೀಟ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡಿ ಎಂದು ಹೈಕಮಾಂ ಡ್‌ಗೆ ಕೇಳಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸವಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದ ಅವರು, ‘ಈಗ ಚಾಲಕ ಸ್ಥಾನದಲ್ಲಿ ಕುಳಿತಿರುವ ಈಶ್ವರಪ್ಪ ದಣಿದಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಚಾಲಕನ ಸೀಟ್‌ನ ಆಸೆಯಿಂದ ಟಿಕೆಟ್ ಕೇಳಿದ್ದೇನೆ. ಪಕ್ಷ ಕೊಡದಿದ್ದರೆ ಸಹ ಚಾಲಕನಾಗಿ ಮುಂದುವರೆಯುವೆ. ಈಶ್ವರಪ್ಪ ಅವರನ್ನು ಎಳೆದು ಅಲ್ಲಿ ಕೂರುವುದಿಲ್ಲ‘ ಎಂದು ಸ್ಪಷ್ಟನೆ ನೀಡಿದರು.

‘ನಗರದಲ್ಲಿ ನನ್ನ ಪರ ಫ್ಲೆಕ್ಸ್‌ಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಅವುಗಳಲ್ಲಿರುವ ವಿಚಾರ ಅವರ ಆಶಯ. ಶಿವಮೊಗ್ಗದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು, ನೆಮ್ಮದಿ ನೆಲೆಸಲು ಈಶ್ವರಪ್ಪ ಶ್ರಮಿಸಿ ಹತೋಟಿಗೂ ತಂದಿದ್ದಾರೆ. ಅವರ ಪ್ರಯತ್ನದ ನಡುವೆಯೂ ನಗರದ ಆರೋಗ್ಯ ಕೆಲವು ರೌಡಿ ಪಡೆಗಳಿಂದ ಕೆಟ್ಟಿದೆ. ಗಲಭೆಗಳಿಂದ ಕಾರ್ಮಿಕರು– ಬಡವರು ಹತಾಶರಾಗಿದ್ದಾರೆ. ಬಹಳಷ್ಟು ವ್ಯಾಪಾರಸ್ಥರು ಸಂಕಷ್ಟ ಅನುಭವಿಸಿದ್ದಾರೆ. ನನಗೆ ಅವಕಾಶ ಕೊಟ್ಟರೆ ಎಲ್ಲರೂ ಭಯವಿಲ್ಲದೇ ಬದುಕುವ ವಾತಾವರಣ ನಿರ್ಮಿಸುವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು