ಸಾಗರ: ‘ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ಕೈ ಬಿಡಬೇಕು’ ಎಂದು ಒತ್ತಾಯಿಸಿ ಶಿಕ್ಷಕರ ಸಂಘದ ವತಿಯಿಂದ ಗುರುವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

‘ಗರ್ಭಿಣಿ ಶಿಕ್ಷಕಿಯರನ್ನು, ಚಿಕ್ಕ ಮಕ್ಕಳನ್ನು ಹೊಂದಿರುವ ಶಿಕ್ಷಕಿಯರನ್ನು, ಅಂಗವಿಕಲ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಬಾರದು. ಬ್ಲಾಕ್ ವಿಂಗಡಣೆ ಮಾಡುವಾಗ ಆಯಾ ಕ್ಲಸ್ಟರ್ನ ಸಿಆರ್ಪಿ, ಇಸಿಒಗಳ ನೆರವಿನೊಂದಿಗೆ ಗಣತಿದಾರರಿಗೆ ಬ್ಲಾಕ್ ಹಂಚಿಕೆ ಮಾಡಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.

ಗಣತಿ ಕಾರ್ಯಕ್ಕೆ ಶಿಕ್ಷಕರ ಕೊರತೆಯನ್ನು ನೀಗಿಸಲು ಪ್ರೌಢಶಾಲಾ ಶಿಕ್ಷಕರನ್ನು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಿಯೋಜನೆ ಸಂದರ್ಭದಲ್ಲಿ ಶಿಕ್ಷಕರ ಬೇಡಿಕೆಗಳಿಗೆ ತಾಲ್ಲೂಕು ಆಡಳಿತ ಸ್ಪಂದಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಾಲತೇಶ್, ದಿನೇಶ್, ಶಾರದಾ, ರಾಜಶೇಖರ ಶೆಟ್ಟಿ, ಎಂ.ಪಿ.ಸತ್ಯನಾರಾಯಣ, ವಿಕ್ಟೊರಿಯಾ ಫರ್ನಾಂಡಿಸ್, ಅಲ್ಲಾಭಕ್ಷಿ, ಗವಿಯಪ್ಪ ಎಲ್.ಟಿ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.