ಮುಟ್ಟಿನ ರಜೆ ಸೌಲಭ್ಯಕ್ಕೆ ಅಪಸ್ವರ ಸಲ್ಲ
ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜಾ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ನಡೆಯಾಗಿದೆ. ಆದರೆ ಕೆಲವರು ಇದಕ್ಕೂ ಅಪಸ್ವರ ಎತ್ತುತ್ತಿರುವುದು ಸಂವೇದನಾರಹಿತ ನಡವಳಿಕೆಯಾಗಿದೆ ಎಂದು ಪ್ರಫುಲ್ಲಾ ಮಧುಕರ್ ಹೇಳಿದರು. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ಅನೇಕ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗಿದೆ. ಈ ಯೋಜನೆಯ ಬಗ್ಗೆಯೂ ಕುಹಕವಾಡುವುದು ಸರಿಯಲ್ಲ ಎಂದರು.