ವಿವೇಕಾನಂದ ಜನ್ಮ ದಿನ: ವಾಕಥಾನ್

ಶಿವಮೊಗ್ಗ: ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ನಗರದ ಶಿವಮೂರ್ತಿ ವೃತ್ತದಿಂದ ಗೋಪಿ ವೃತ್ತದವರೆಗೆ ವಾಕಥಾನ್ ನಡೆಯಿತು.
ವಿವೇಕಾನಂದ ಅವರ ಅಭಿಮಾನಿಗಳು, ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ವಾಕಥಾನ್ನಲ್ಲಿ ‘ನಾನು ಸ್ವಾವಲಂಬಿ ನನ್ನ ಕುಟುಂಬವೂ ಸ್ವಾವಲಂಬಿ’, ‘ಸ್ವದೇಶಿ ಜೀವನ ಶೈಲಿ, ಸ್ವದೇಶಿ ವಸ್ತು ಬಳಕೆ’, ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’, ‘ಆತ್ಮನಿರ್ಭರ ಭಾರತಕ್ಕಾಗಿ ನಾನು’, ‘ಒಳ್ಳೆಯವನಾಗು ಉಪಕಾರಿಯಾಗು’ ಹೀಗೆ ನಾನಾ ಸಂದೇಶಗಳ ಫಲಕ ಹಿಡಿದು ಅಭಿಮಾನಿಗಳು, ಜಿಜೆಪಿ ಕಾರ್ಯಕರ್ತರು ನಡೆದರು.
ಜೀವನ ಚರಿತ್ರೆ ಕುರಿತು ಮಾತನಾಡಿದ ಮುಖಂಡ ಕಿರಣ್ ಹೆಗ್ಗತ್ತಿ, ‘ವಿವೇಕಾನಂದರು ದೈವದ ಮೇಲೆ ನಿರ್ಧಾರ ಬಿಟ್ಟಿದ್ದರೂ ಮಾನವ ಪ್ರಯತ್ನವನ್ನು ಬಿಟ್ಟಿರಲಿಲ್ಲ. ರಾಮಕೃಷ್ಣ ಪರಮಹಂಸರು ಗರ್ಭಗುಡಿಯ ದೇವರಾದರೆ, ವಿವೇಕಾನಂದರು ಉತ್ಸವ ಮೂರ್ತಿ. ವಿವೇಕಾನಂದರು ಗರ್ಭಗುಡಿಯ ದೇವರಾದರೆ ಸಹೋ
ದರಿ ನಿವೇದಿತಾ ಉತ್ಸವ ಮೂರ್ತಿ. ನಿವೇದಿತಾ ಅವರು ಗರ್ಭಗುಡಿ ದೇವರಾದರೆ ನಾವೆಲ್ಲರೂ ಉತ್ಸವ ಮೂರ್ತಿಗಳಾಗೋಣ’ ಎಂದರು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರಿಕೃಷ್ಣ, ಮುಖಂಡರಾದ ದರ್ಶನ್, ಜಗನ್ನಾಥ್, ಅಭಿಷೇಕ್, ಸಂತೋಷ್ ಬೆಳ್ಳೆಕೆರೆ, ಇ.ವಿಶ್ವಾಸ್, ರಾಹುಲ್ ಬಿದರೆ, ಪಾಲಿಕೆ ಸದಸ್ಯೆ ಸಂಗೀತ ನಾಗರಾಜ್, ದತ್ತಾತ್ರಿ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.