ವೈದ್ಯಕೀಯ ಕಾಲೇಜಿಗೆ ಸ್ಥಳ ನಿಗದಿ

7
ರಾಯಸಂದ್ರ ಬಳಿ 25 ಎಕರೆ ಜಾಗ– ಸಚಿವ ಡಿ.ಕೆ.ಶಿವಕುಮಾರ್‌ ಸಮ್ಮತಿ

ವೈದ್ಯಕೀಯ ಕಾಲೇಜಿಗೆ ಸ್ಥಳ ನಿಗದಿ

Published:
Updated:
Deccan Herald

ಕನಕಪುರ: ‘ವಿಶ್ವಾಸವಿಟ್ಟು ಸತತವಾಗಿ ನನ್ನನ್ನು ಗೆಲ್ಲಿಸಿಕೊಂಡು ಬರುತ್ತಿರುವ ತಾಲ್ಲೂಕಿನ ಜನತೆಗೆ ಆರೋಗ್ಯದಲ್ಲಿ ಏನಾದರೂ ಕೊಡುಗೆ ಕೊಡಬೇಕೆಂಬುದು ನನ್ನ 10 ವರ್ಷದ ಕನಸಾಗಿತ್ತು. ಅದಕ್ಕಾಗಿ ಮೆಡಿಕಲ್‌ ಕಾಲೇಜನ್ನು ತಾಲ್ಲೂಕಿಗೆ ಕೊಡಿಸಿದ್ದು ಶೀಘ್ರವೇ ಕಟ್ಟಡ ನಿರ್ಮಾಣ ಮಾಡಿಕೊಡುವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ತಾಲ್ಲೂಕಿಗೆ ವೈದ್ಯಕೀಯ ಕಾಲೇಜನ್ನು ಸರ್ಕಾರ ಮಂಜೂರು ಮಾಡಿದೆ. ಅದಕ್ಕೆ ಜಾಗವನ್ನು ನಿರ್ಧರಿಸಿರಲಿಲ್ಲ. ತಾಲ್ಲೂಕಿನ ಎಲ್ಲ ಜನತೆಗೆ ಅನುಕೂಲವಾಗುವಂತ ಸೂಕ್ತ ಜಾಗವನ್ನು ಹುಡುಕುತ್ತಿದ್ದು, ಬೆಂಗಳೂರು ಹೆದ್ದಾರಿ ರಸ್ತೆಯಲ್ಲಿ ಬರುವ ರಾಯಸಂದ್ರ ಬಳಿಯ ಹೌಸಿಂಗ್‌ ಬೋರ್ಡ್‌ನ ಜಾಗ ಇದಕ್ಕೆ ಸೂಕ್ತ. ಅದರಲ್ಲಿ 25 ಎಕರೆ ಜಾಗವನ್ನು ಕಾಲೇಜಿಗೆ ಅಂತಿಮಗೊಳಿಸಿರುವುದಾಗಿ ಹೇಳಿದರು.

ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಹೌಸಿಂಗ್‌ ಬೋರ್ಡ್‌ನವರು ಈವರೆಗೂ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಯಾರಿಗೂ ಕೊಟ್ಟಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಪಾಸ್‌ ಸಂಪರ್ಕ ರಸ್ತೆ ಸೇರುವ ಜಾಗದಲ್ಲೇ ಜಾಗ ಇರುವುದರಿಂದ ಇಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಜಾಗವನ್ನು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ನೀಡಿದ್ದಾರೆ ಎಂದರು.

ಆಸ್ಪತ್ರೆ ಒಳಗೊಂಡಂತೆ ಕಾಲೇಜನ್ನು ಮಾದರಿಯಾಗಿ ನಿರ್ಮಿಸಲಾಗುವುದು. 400 ರಿಂದ 700 ಹಾಸಿಗೆಯಷ್ಟು ಆಸ್ಪತ್ರೆ ಇರಲಿದೆ. ದೊಡ್ಡ ಯೋಜನೆ ಆಗಿರುವುದರಿಂದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟ 2 ರಿಂದ 3 ವರ್ಷಗಳ ಕಾಲ ಕಾಲಾವಕಾಶ ಬೇಕಾಗಬಹುದು ಎಂದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿ, ಅಧಿಕಾರಿಗಳು ಮೆಡಿಕಲ್‌ ಕಾಲೇಜಿಗೆ ಜಾಗ ಗುರುತು ಮಾಡಿವುದನ್ನು ತೋರಿಸಿದರು.

ಮುಖಂಡರಾದ ಕೆ.ಎನ್‌.ದಿಲೀಪ್‌, ಮಳಗಾಳು ಮಂಜುನಾಥ್‌, ಬಸವರಾಜು, ತಿಮ್ಮಪ್ಪ, ರವೀಂದ್ರ (ಪಪ್ಪಿ), ಪುಟ್ಟಸ್ವಾಮಿ, ವಿಜಯಕುಮಾರ್‌, ರಾಜಶೇಖರ್‌, ಡಿ.ವೈ.ಎಸ್‌.ಪಿ. ಮಂಜುನಾಥ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಲ್ಲೇಶ್‌ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !