ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೀಡೆಗಳಿಗೆ ಆದ್ಯತೆ ಕೊಡಿ’

Last Updated 1 ಆಗಸ್ಟ್ 2019, 14:58 IST
ಅಕ್ಷರ ಗಾತ್ರ

ತಿಕೋಟಾ: ‘ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಗಳೂ ಸಹ ಅಷ್ಟೆ ಅವಶ್ಯಕ. ಹೀಗಾಗಿ ಕ್ರೀಡೆಗಳಿಗೆ ಆದ್ಯತೆ ನೀಡಬೇಕು’ ಎಂದು ಸಿದ್ದಾಪುರ(ಕೆ) ಕ್ಲಸ್ಟರ್‌ನ ಸಿಆರ್‌ಪಿ ಧರೆಪ್ಪ ಪಾಂಡೆಗಾಂವಿ ಹೇಳಿದರು.

ತಾಲ್ಲೂಕಿನ ಸಿದ್ದಾಪುರ (ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು

‘ವ್ಯಕ್ತಿತ್ವ ವಿಕಸನ, ದೈಹಿಕ ಶ್ರಮತೆ, ನಾಯಕತ್ವ ಗುಣ, ಸದೃಢ ಶರೀರವನ್ನು ಹೊಂದಲು ಕ್ರೀಡೆಗಳು ಸಹಕಾರಿಯಾಗಿವೆ. ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಕ್ರೀಡಾಕೂಟವು ಶಾಲೆ ಮತ್ತು ಮಕ್ಕಳ ನಡುವಿನ ಬಾಂಧವ್ಯ, ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುತ್ತದೆ’ ಎಂದು ಹೇಳಿದರು.

ತಾಲ್ಲೂಕು ಶಿಕ್ಷಕರ ಸಂಘದ ಪದಾಧಿಕಾರಿ ಅರ್ಜುನ ಎಂ.ಬಗಲಿ ಮಾತನಾಡಿ, ‘ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಪೂರ್ಣ ಸ್ಪರ್ಧೆಗಳು ಅವಶ್ಯಕ’ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಖೋತ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎನ್.ಹಿರೇಮಠ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಸರ್ಕಾರಿ ನೌಕರ ಸಂಘದ ಪ್ರತಿನಿಧಿ ಎಂ.ಎಸ್.ಟಕ್ಕಳಕಿ, ಮುಖ್ಯ ಶಿಕ್ಷಕ ಸಿ.ಎಂ.ಆಜೂರ, ಎನ್‌ಪಿಎಸ್‌ ನೌಕರರ ತಾಲ್ಲೂಕು ಘಟಕದ ಕಾರ್ಯದರ್ಶಿ ವಿ.ಎಸ್.ಕಪಟಕರ, ಎಸ್.ಎಸ್.ಜಂಗಮಶೆಟ್ಟಿ, ಎ.ಆರ್.ತುಬಾಕೆ, ಎ.ಎಂ.ಕೋರಿ, ಶಂಕರ ಲಮಾಣಿ, ಎಂ.ಎಸ್.ಮಠಪತಿ, ಅಶೋಕ ಖೋತ, ಅಶೋಕ ನಿಡೋಣಿ ಇದ್ದರು.

ಎಂ.ಸಿ.ಚವಾಣ ಸ್ವಾಗತಿಸಿದರು. ಭಾರತಿ ಸೂರಟೂರ ನಿರೂಪಿಸಿ, ಕೆ.ಬಿ.ಹಿರೇಮಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT