ಮಾಜಿ ಶಾಸಕರ ಹಳೆ ಮನೆಯಲ್ಲಿ ಕಳ್ಳತನ

7

ಮಾಜಿ ಶಾಸಕರ ಹಳೆ ಮನೆಯಲ್ಲಿ ಕಳ್ಳತನ

Published:
Updated:

ವಿಜಯಪುರ: ಇಲ್ಲಿನ ವಿವೇಕ ನಗರದಲ್ಲಿರುವ ಮಾಜಿ ಶಾಸಕ ಪ್ರೊ.ರಾಜು ಆಲಗೂರರ ಹಳೆಯ ಮನೆಯಲ್ಲಿ ಕಳ್ಳತನ ನಡೆದಿದೆ. ಮಾಜಿ ಶಾಸಕರ ಕುಟುಂಬ ಈ ಮನೆಯಲ್ಲಿ ವಾಸ್ತವ್ಯವಿಲ್ಲ. ಅಥಣಿ ರಸ್ತೆಯಲ್ಲಿನ ಹೊಸ ನಿವಾಸದಲ್ಲಿದೆ.

ಬುಧವಾರ ಮಾಜಿ ಶಾಸಕರ ಕುಟುಂಬದವರು ಮನೆಗೆ ಬಂದು, ಬೀಗ ಹಾಕಿಕೊಂಡು ಮರಳಿದ್ದರು. ಗುರುವಾರ ಭೇಟಿ ನೀಡಿರಲಿಲ್ಲ. ಶುಕ್ರವಾರ ಸಂಜೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಜಲನಗರ ಪೊಲೀಸರು ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಸಿಸಿ ಟಿವಿ ಕ್ಯಾಮೆರಾ, ರಿಸೀವರ್‌ ಪರಿಶೀಲನೆ ನಡೆಸಿದ್ದಾರೆ. ಏನು ಕಳವಾಗಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಯಾವಾಗ ಕಳವು ನಡೆದಿದೆ ಎಂಬುದು ಗೊತ್ತಾಗಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !