ಮಕ್ಕಳ ಕಲ್ಪನೆಗೆ ಕುಂಚ ‘ಟಿಂಕರಿಂಗ್ ಲ್ಯಾಬ್’

7
ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಡೆಸುತ್ತಿರುವ ಜಿಲ್ಲೆಯ ಮೊದಲ ಪ್ರಯೋಗಾಲಯ

ಮಕ್ಕಳ ಕಲ್ಪನೆಗೆ ಕುಂಚ ‘ಟಿಂಕರಿಂಗ್ ಲ್ಯಾಬ್’

Published:
Updated:
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಅಟಲ್‌ ಟಿಂಕರಿಂಗ್ ಲ್ಯಾಬ್‌ನಲ್ಲಿ ತಯಾರಿಸಿದ ಮರದ ಸಾಮಗ್ರಿ ಕತ್ತರಿಸಲು ಬಳಸುವ ಸಿಎನ್‌ಸಿ ಮಷಿನ್ ಅನ್ನು ತೋರಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು

ಶಿರಸಿ: ವಿದ್ಯಾರ್ಥಿಗಳಲ್ಲಿ ಅನ್ವೇ ಷಣಾ ಪ್ರವೃತ್ತಿ ಹೆಚ್ಚಿಸುವ ಮಹತ್ವಾ ಕಾಂಕ್ಷೆಯಿಂದ ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಆರಂಭವಾ ಗಿರುವ ಜಿಲ್ಲೆಯ ಮೊದಲ ಅಟಲ್ ಟಿಂಕರಿಂಗ್ ಲ್ಯಾಬ್, ಮೂಲ ಉದ್ದೇಶ ವನ್ನು ಸಾಫಲ್ಯಗೊಳಿಸುವ ದಿಸೆಯಲ್ಲಿ ಸಾಗಿದೆ.

ಕೇಂದ್ರ ಸರ್ಕಾರವು ನ್ಯಾಷ ನಲ್ ಇನಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ ಫಾರ್ಮಿಂಗ್ ಇಂಡಿಯಾ ಅಡಿಯಲ್ಲಿ ದೇಶದ ವಿವಿಧೆಡೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಆರಂಭಿಸಿತು. ಉತ್ತರ ಕನ್ನಡ ಜಿಲ್ಲೆಗೆ ಮಂಜೂರು ಆಗಿದ್ದ ಏಕೈಕ ಪ್ರಯೋಗಾಲಯವನ್ನು ಅತಿ ಹೆಚ್ಚು ವಿದ್ಯಾರ್ಥಿಗಳು ಬರುವ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಯಿತು.

ಒಂದು ವರ್ಷದ ಹಿಂದೆ ಆರಂಭವಾಗಿರುವ ಪ್ರಯೋಗಾಲಯದಲ್ಲಿ, ಸಾಮಾನ್ಯ ಪ್ರಯೋಗಾಲಯದಂತೆ ರಾಸಾಯನಿಕ ತುಂಬಿರುವ ಬಿರಡೆಗಳು, ಬಣ್ಣದ ದ್ರಾವಣ, ಅಸ್ಥಿಪಂಜರ, ಸತ್ತ ಜೀವಿಗಳ ದೇಹ ಇಂತಹವುಗಳು ಕಾಣುವುದಿಲ್ಲ. ಇಲ್ಲಿ ಕೌಶಲ ಬಳಸಿ, ಹೊಸತನ್ನು ಸಿದ್ಧಪಡಿಸುವ ಎಲೆಕ್ಟ್ರಾನಿಕ್ ಮತ್ತು ರೊಬೋಟಿಕ್ ವಸ್ತುಗಳು ಮಾತ್ರ ಇರುತ್ತವೆ.

‘ಎರಡು ಕಂತುಗಳಲ್ಲಿ ₹ 8ಲಕ್ಷ ಸಾಮಗ್ರಿ ಖರೀದಿ, ₹ 2ಲಕ್ಷ ಕೊಠಡಿ ನಿರ್ಮಾಣ, ₹ 2ಲಕ್ಷ ನಿರ್ವಹಣೆಗೆ ಮಂಜೂರು ಆಗಿವೆ. ಆಯ್ದ 30 ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ವಿಶೇಷ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ. ಟಿಂಕರಿಂಗ್ ಲ್ಯಾಬ್‌ ಬಗ್ಗೆ ಮಕ್ಕಳು ಆಸಕ್ತಿ ಹೊಂದಿದ್ದಾರೆ.

ಇದು ಅವರಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿದೆ. ಈ ಪ್ರಯೋಗಶಾಲೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಚೆನ್ನೈ, ಹೈದ್ರಾಬಾದಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು’ ಎನ್ನುತ್ತಾರೆ ಉಪಪ್ರಾಚಾರ್ಯ ನಾಗರಾಜ ನಾಯ್ಕ.

‘ನಮಗೆ ಮನಸ್ಸಿಗೆ ಹೊಳೆಯುವ ಹೊಸ ವಿಚಾರಗಳನ್ನು ಪ್ರಾಯೋಗಿಕವಾಗಿ ಮಾಡಲು ಟಿಂಕರಿಂಗ್ ಲ್ಯಾಬ್ ಅನುಕೂಲವಾಗಿದೆ. ನಮಗೆ ಇಲ್ಲಿ ಸಮಯ ಕಳೆಯಲು ತುಂಬಾ ಖುಷಿಯಾಗುತ್ತದೆ’ ಎಂದು 10ನೇ ತರಗತಿಯ ವಿದ್ಯಾರ್ಥಿ ಎಚ್.ಎಂ.ಶ್ರೀಮುಖ ಪ್ರತಿಕ್ರಿಯಿಸಿದರು.

ಎರಡು ಹೊಸ ಪ್ರಯೋಗಾಲಯ: ಕಳೆದ ಡಿಸೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮಂಜೂರು ಆಗಿರುವ ಏಳು ಹೊಸ ಟಿಂಕರಿಂಗ್ ಲ್ಯಾಬ್‌ಗಳಲ್ಲಿ ಎರಡು ಶಿರಸಿ ಶೈಕ್ಷಣಿಕ ಜಿಲ್ಲೆಗೆ ದೊರೆತಿದೆ. ಸಿದ್ದಾಪುರ ಹಾಳದಕಟ್ಟಾದ ಸರ್ಕಾರಿ ಪ್ರೌಢಶಾಲೆ, ಶಿರಸಿಯ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಗಳು ಈ ಪಟ್ಟಿಯಲ್ಲಿವೆ.

‘ಟಿಂಕರಿಂಗ್ ಲ್ಯಾಬ್ ಆರಂಭಿಸಲು ನಾವು ಉತ್ಸುಕರಾಗಿದ್ದು, ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಸದ್ಯದಲ್ಲಿ ಅನುದಾನ ಬಿಡುಗಡೆಯಾಗಬಹುದು’ ಎಂದು ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಎಂ. ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

**

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹೆಚ್ಚಿಸಲು ಲ್ಯಾಬ್ ಸಹಕಾರಿಯಾಗಿದೆ. ಪ್ರಯೋಗ ಗಳನ್ನು ನಡೆಸುವುದರಿಂದ ವಿಜ್ಞಾನ ಪಾಠಗಳು ನಮಗೆ ಸುಲಭವಾಗುತ್ತವೆ.

-ಅಮಿತ್ ಹೆಗಡೆ, ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !