₹ 2.75 ಲಕ್ಷ ಮೊತ್ತದ ಸಾಬೂನು ತಯಾರಿಕೆ ಅಚ್ಚು ವಶ

ಭಾನುವಾರ, ಜೂಲೈ 21, 2019
22 °C

₹ 2.75 ಲಕ್ಷ ಮೊತ್ತದ ಸಾಬೂನು ತಯಾರಿಕೆ ಅಚ್ಚು ವಶ

Published:
Updated:
Prajavani

ತುಮಕೂರು: ನಗರದ ವಿದ್ಯಾನಗರ ಕೈಗಾರಿಕಾ ಪ್ರದೇಶದ 4ನೇ ಕ್ರಾಸ್‌ನಲ್ಲಿರುವ ಕೈಜಾನ್ ಹೆಲ್ತ್ ಕೇರ್ ಸಾಬೂನು ಕಾರ್ಖಾನೆಯ ಕಿಟಕಿ ಕಂಬಿ ಕಿತ್ತು ಸಾಬೂನು ತಯಾರಿಸಲು ಬಳಸುವ ಅಚ್ಚು (ಡೈ ಸೆಟ್) ಕದ್ದಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ದಿಬ್ಬೂರು ಬಡಾವಣೆಯ ಶಿವಾಜಿ ಬಂಧಿತ ಆರೋಪಿಯಾಗಿದ್ದು, ₹ 2.75 ಲಕ್ಷ ಮೊತ್ತದ  ಅಚ್ಚನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 2ರಂದು ಆರೋಪಿಯು ಕಳ್ಳತನ ಮಾಡಿದ್ದ. ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಸಿಪಿಐ ಟಿ.ಎಸ್. ರಾಧಾಕೃಷ್ಣ ನೇತೃತ್ವದಲ್ಲಿ ಜಯನಗರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಎಚ್.ಎಸ್. ನವೀನ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಒಳಗೊಂಡ ತಂಡವು ಡಿವೈಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಆರೋಪಿ ಬಂಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !