ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾವಿದರಿಗೇ ವಿಫುಲ ಉದ್ಯೋಗಾವಕಾಶ

ಬಾ ಬಾಪು–150ನೇ ವರ್ಷಾಚರಣೆ:ರವೀಂದ್ರ ಕಲಾ ನಿಕೇತನ ಡಿಜಿಟಲ್ ಕಲಾಕೃತಿ ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಮುರಳೀಧರ ಹಾಲಪ್ಪ
Last Updated 18 ಆಗಸ್ಟ್ 2019, 5:45 IST
ಅಕ್ಷರ ಗಾತ್ರ

ತುಮಕೂರು: ‘ಚಿತ್ರಕಲಾವಿದರಿಗೆ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಫುಲ ಅವಕಾಶಗಳಿದ್ದು, ಕಲೆಗೆ ಸಂಬಂಧಪಟ್ಟ ತಾಂತ್ರಿಕ ಜ್ಞಾನ, ಕೌಶಲವಿದ್ದರೆ ಮನೆ ಬಾಗಿಲಿಗೆ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ’ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಹಾಗೂ ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯ ಬಾ ಬಾಪು–150ನೇ ವರ್ಷಾಚರಣೆ ಅಂಗವಾಗಿ ರವೀಂದ್ರ ಕಲಾ ನಿಕೇತನ, ಚಿತ್ರಕಲಾ ಮಹಾವಿದ್ಯಾಯದಲ್ಲಿ ಶನಿವಾರ ಆಯೋಜಿಸಿದ್ಧ ವಿಚಾರಸಂಕಿರಣ ಮತ್ತು ಡಿಜಿಟಲ್ ಕಲಾಕೃತಿಗಳು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

'ವ್ಯಾಟಿಕನ್‌ನಂತಹ ಚಿಕ್ಕ ರಾಷ್ಟ್ರ ಕಲೆಗೆ ಹೆಸರುವಾಸಿಯಾದ ರಾಷ್ಟ್ರ. ಅಲ್ಲಿ ಮಧುಗಿರಿಯ ಕಲಾವಿದರಾದ ರಾಮು ಮತ್ತು ತುಮಕೂರಿನ ರವೀಶ್ ಅವರ ಕಲಾಕೃತಿಗಳು ಪ್ರದರ್ಶನಗೊಂಡು ಸ್ಥಿರ ಸ್ಥಾನ ಪಡೆದುಕೊಂಡಿವೆ. ಮೈಸೂರು ಅರಮನೆಯ ಹೆಬ್ಬಾಗಿಲಿನ ಕಲಾಕೃತಿಗಳಲ್ಲಿ ರಾಮು ಅವರ ಕಲಾ ಕೌಶಲ ಎದ್ದು ಕಾಣುತ್ತದೆ' ಎಂದು ಹೇಳಿದರು.

ಜಿಲ್ಲೆಯಲ್ಲಿ ಕಲಾ ಪ್ರತಿಭೆಗಳಿಗೆ ಕೊರತೆ ಇಲ್ಲ. ಬೆಂಗಳೂರಿನ ಕಲಾವಿದರಿಗಿಂತ ಕಡಿಮೆ ಇಲ್ಲ. ಆದರೆ, ಅವರಿಗೆ ಅವಕಾಶಗಳನ್ನು ಬಳಸಿಕೊಳ್ಳುವ ಮಾರ್ಗದ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು.

ಹಿಂಜರಿಕೆ ಬಿಟ್ಟು ಈ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಹೊರಜಗತ್ತಿನಲ್ಲಿ ಪ್ರದರ್ಶನ ಮಾಡಬೇಕು. ಕಲೆಗೆ ಈಚೆಗೆ ತಾಂತ್ರಿಕತೆಯ ಸ್ಪರ್ಶವಾಗಿದ್ದು, ಡಿಜಿಟಲ್ ಕಲಾಕೃತಿ ರಚನೆಯಲ್ಲಿ ಕ್ರಾಂತಿಯೇ ಆಗುತ್ತಿದೆ. ಈ ಕುರಿತು ಹೆಚ್ಚಿನ ತರಬೇತಿ ಪಡೆಯಬೇಕು. ಕಾಲೇಜಿನವರು ಕ್ಯಾಂಪಸ್ ಸಂದರ್ಶನ ಆಯೋಜಿಸಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪರಿಣಿತ ಕಲಾವಿದರಿಂದ ಮಾರ್ಗದರ್ಶನ, ಈ ಕ್ಷೇತ್ರದಲ್ಲಿ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ದಿಶೆಯಲ್ಲಿ ಶಿಬಿರ ನಡೆಸಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಬಾಬುರಾವ್ ಮಾತನಾಡಿ, ‘ಕಾಲಕ್ಕೆ ತಕ್ಕಂತೆ ಚಿತ್ರಕಲಾ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಮೈಗೂಡಿಸಿಕೊಂಡು ಕಾಲೇಜಿನ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ, ಚಲನಚಿತ್ರ ಕ್ಷೇತ್ರ, ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ' ಎಂದು ಹೇಳಿದರು.

'ಡಿಜಿಟಲ್ ಚಿತ್ರಕಲಾ ಕೃತಿ ರಚನೆ ಕುರಿತಂತೆ ಈಚೆಗೆ ರುಡ್‌ಸೆಟ್‌ ಸಂಸ್ಥೆಯ ನೆರವಿನಲ್ಲಿ 25 ವಿದ್ಯಾರ್ಥಿಗಳು 45 ದಿನ ತರಬೇತಿ ಪಡೆದಿದ್ದು, ಅಲ್ಲಿನ ತರಬೇತಿ ಜ್ಞಾನದ ಆಧಾರದ ಮೇಲೆ ರಚಿಸಿದ ಚಿತ್ರಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ' ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಬಸವಯ್ಯ ಅಧ್ಯಕ್ಷತೆವಹಿಸಿದ್ದರು. ಕಲಾವಿದರಾದ ರವೀಶ್, ಜೆ.ಕೆ.ಅಭಿಜಿತ್, ನಿರ್ದೇಶಕ ಗಿರೀಶ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT