ಉಲುಚುಕಮ್ಮೆ ಬ್ರಾಹ್ಮಣರ ಸಂಘಟನೆಗೆ ಕ್ರಮ

7
ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಎಸ್.ಮಂಜುನಾಥ ಅಭಿಪ್ರಾಯ

ಉಲುಚುಕಮ್ಮೆ ಬ್ರಾಹ್ಮಣರ ಸಂಘಟನೆಗೆ ಕ್ರಮ

Published:
Updated:
Prajavani

ತುಮಕೂರು: ರಾಜ್ಯಾದಾದ್ಯಂತ ವಿವಿಧೆಡೆ ನೆಲೆಸಿರುವ ಉಲುಚುಕಮ್ಮೆ ಬ್ರಾಹ್ಮಣ ಸಮುದಾಯದವರನ್ನು ಗುರುತಿಸಿ ಅವರನ್ನು ಸಭಾದ ಸದಸ್ಯರನ್ನಾಗಿಸಲು ಕಾರ್ಯ ರೂಪಿಸಲಾಗುತ್ತಿದೆ ಎಂದು ಉಲುಚುಕಮ್ಮೆ ಬ್ರಾಹ್ಮಣ ಸಭಾದ ನೂತನ ರಾಜ್ಯ ಘಟಕದ ಅಧ್ಯಕ್ಷ ಎಸ್.ಮಂಜುನಾಥ ತಿಳಿಸಿದರು.

ನಗರದ ಶಂಕರಮಠದಲ್ಲಿ ಜಿಲ್ಲಾ ಉಲುಚುಕಮ್ಮೆ ಬ್ರಾಹ್ಮಣ ಸಭಾದಿಂದ ಆಯೋಜಿಸಿದ್ದ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಹಾಗೂ ಉಲುಚುಕಮ್ಮೆ ಬ್ರಾಹ್ಮಣ ಸಭಾದ ಆನ್‌ಲೈನ್ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿದರು.

ಬ್ರಾಹ್ಮಣ ವಿದ್ಯಾರ್ಥಿನಿಯರಿಗೆ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತವಾದ ಮಹಿಳಾ ವಿದ್ಯಾರ್ಥಿ ನಿಲಯ ಸ್ಥಾಪನೆ ಆದ್ಯ ಕರ್ತವ್ಯವಾಗಿದೆ. ಬೆಂಗಳೂರಿನಲ್ಲಿರುವ ಹಾಲಿ ಇರುವ ಬಾಲಕರ ವಿದ್ಯಾರ್ಥಿ ನಿಲಯವನ್ನು ಉನ್ನತ ದರ್ಜೆಗೆ ಏರಿಸುವುದು, ಸುಸಜ್ಜಿತವಾದ ಸಭಾಂಗಣ ನಿರ್ಮಾಣ ಹಾಗೂ ಕಾಲೇಜು ಸ್ಥಾಪನೆ ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಉಲುಚುಕಮ್ಮೆ ಬ್ರಾಹ್ಮಣಸಭಾದ ಮಾಜಿ ಅಧ್ಯಕ್ಷ ವಿ.ಮಂಜುನಾಥ್, ಸಭಾದ ಕಾರ್ಯದರ್ಶಿ ಮುರಳೀಧರ ಶಾಸ್ತ್ರಿ,  ಉಪಾಧ್ಯಕ್ಷ ಕೆ.ನರಸಿಂಹಮೂರ್ತಿ, ಗೌರವಾಧ್ಯಕ್ಷೆ ಇಂದಿರಮ್ಮ ಸುಂದರರಾವ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !