ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆಲಿಂಡಿಯಾ ರೇಡಿಯೊ’ ಪ್ರದರ್ಶನ

Published 27 ಜೂನ್ 2024, 4:21 IST
Last Updated 27 ಜೂನ್ 2024, 4:21 IST
ಅಕ್ಷರ ಗಾತ್ರ

ತುಮಕೂರು: ‘ಆಲಿಂಡಿಯಾ ರೇಡಿಯೊ’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಗರದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಬುಧವಾರ ನೆರವೇರಿತು.

ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹಾಗೂ ತುಮಕೂರು ವಿ.ವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ತುಮಕೂರು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ‘ಹಳೆಯ ಚಲನಚಿತ್ರಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ಇಂದಿನ ಸಿನಿಮಾಗಳಲ್ಲಿ ಅದು ಕಡಿಮೆಯಾಗಿದೆ. ಚಲನಚಿತ್ರ ಸಾಹಿತ್ಯ, ಬರವಣಿಗೆ ಕುರಿತು ಅಧ್ಯಯನ ನಡೆಸಲು ವಿ.ವಿ ನೂತನ ಕ್ಯಾಂಪಸ್‍ನಲ್ಲಿ ಹೊಸ ಯೋಜನೆ ರೂಪಿಸುವ ಆಲೋಚನೆ ಇದೆ’ ಎಂದರು.

‘ಸಿದ್ಧಾರ್ಥ ಸಂಪದ’ ಪ್ರಾಯೋಗಿಕ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ, ತುಮಕೂರು ವಿ.ವಿ ಕುಲಸಚಿವೆ ನಾಹಿದಾ ಜಮ್ ಜಮ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ‘ಆಲಿಂಡಿಯಾ ರೇಡಿಯೊ’ ಚಿತ್ರ ನಿರ್ದೇಶಕ ಎಸ್‌.ರಂಗಸ್ವಾಮಿ, ಕಥೆಗಾರ ಪ್ರೊ.ಅಮರೇಶ್ ನುಗಡೋಣಿ, ನಟರಾದ ಹನುಮಂತೇಗೌಡ, ಯೋಗಿ, ಎಸ್‌ಎಸ್‌ಐಟಿ ಪ್ರಾಂಶುಪಾಲ ಎಂ.ಎಸ್‌.ರವಿಪ್ರಕಾಶ, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಟಿ.ಮುದ್ದೇಶ್‌, ಎಸ್‍ಎಸ್‍ಐಬಿಎಂ ಪ್ರಾಂಶುಪಾಲರಾದ ಜಿ.ಮಮತಾ, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಹೇಮಲತಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT