ಶುಕ್ರವಾರ, ಜೂನ್ 18, 2021
28 °C

ಠಾಣೆಯಿಂದ ಪರಾರಿಯಾಗಿದ್ದ ಕಳ್ಳನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವಿಚಾರಣೆಗೆ ಕರೆತಂದಿದ್ದ ವೇಳೆ ಕೋರ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ರಂಗಪ್ಪ (38) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ₹10 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಅಂತರಸನಹಳ್ಳಿ ರಂಗಪ್ಪ ಇತ್ತೀಚೆಗೆ ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದ ಮನೆಗೆ ನುಗ್ಗಿ ಮಹಿಳೆಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಈ ಬಗ್ಗೆ ಮುನೇಶ್ ಎಂಬುವರು ಕೋರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಲಾಕಪ್‌ನಿಂದ ಪರಾರಿ: ಆರೋಪಿಯನ್ನು ವಶಕ್ಕೆ ಪಡೆದು ಆ. 6ರಂದು ಕೋರ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಡಲಾಗಿತ್ತು. ಅದೇ ದಿನ ರಾತ್ರಿ ತಪ್ಪಿಸಿಕೊಂಡಿದ್ದರು. ನಂತರ ಬಂಧನಕ್ಕೆ ಶಿರಾ ಠಾಣೆ ಪಿಎಸ್ಐ ಭಾರತಿ ಮತ್ತು ಸಿಬ್ಬಂದಿ ಶಿವಕುಮಾರ್, ನಾಗರಾಜು ನೇತೃತ್ವದ ತಂಡ ರಚಿಸಲಾಗಿತ್ತು. ಆರೋಪಿಯನ್ನು ಮಧುಗಿರಿ ತಾಲ್ಲೂಕು ಮರುವೇಕೆರೆ ಗ್ರಾಮದಲ್ಲಿ ಬಂಧಿಸಲಾಗಿದೆ.

ವಡ್ಡರಹಳ್ಳಿ, ಶಂಭೋನಹಳ್ಳಿ, ಮುದ್ದರಾಮಯ್ಯನ ಪಾಳ್ಯ, ಡಿ.ಕೊರಟಗೆರೆ, ಹಿರೇಗುಂಡಗಲ್, ಹಂಚಿಹಳ್ಳಿ ಗ್ರಾಮಗಳಲ್ಲಿ ಒಂಟಿ ಮನೆಗಳಲ್ಲಿ ಮಲಗಿದ್ದ ಹೆಂಗಸರ ಸರಗಳನ್ನು ಕಳವು ಮಾಡಿದ್ದ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7, ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ 11 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.