ಬುಧವಾರ, ಸೆಪ್ಟೆಂಬರ್ 29, 2021
20 °C

ಕುಂಚಿಟಿಗ ಜನಗಣತಿ ಪ್ರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ವಿಶ್ವ ಕುಂಚಿಟಿಗ ಯುವ ಶಕ್ತಿಯು ಮೊಬೈಲ್ ಮೂಲಕ ಕುಂಚಿಟಿಗರ ಜನಗಣತಿಯನ್ನು ಪ್ರಾರಂಭಿಸಿದೆ. ಈ ಜನಗಣತಿಯಲ್ಲಿ ಪ್ರತಿಯೊಬ್ಬ ಕುಂಚಿಟಿಗ ಬಾಂಧವರು ಪಾಲ್ಗೊಳ್ಳಬೇಕು ಎಂದು ವಿಶ್ವ ಕುಂಚಿಟಿಗ ಯುವಶಕ್ತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಶಾಂತ್ ತಿಳಿಸಿದ್ದಾರೆ.

ಕುಂಚಿಟಿಗ ಸಮುದಾಯ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಸ್ಥಳದಲ್ಲಿಯೇ ಜನಗಣತಿಯ ಡಿಜಿಟಲ್ ಐಡಿ ಕಾರ್ಡ್ ಪಡೆಯಬಹುದು. ಮುಂದಿನ ದಿನಗಳಲ್ಲಿ ಈ ಐಡಿ ಕಾರ್ಡ್‌ ಅನ್ನು ಪ್ರತಿಯೊಂದು ಮನೆಗೂ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸುಮಾರು 32 ಅಂಶಗಳನ್ನು ಒಳಗೊಂಡಂತಹ ಪ್ರತಿಯೊಬ್ಬ ಕುಂಚಿಟಿಗರ ಮಾಹಿತಿಯನ್ನು ಒಂದು ಕಡೆ ಡಿಜಿಟಲೀಕರಿಸಿ ಸಂಗ್ರಹಿಸಲಾಗುವುದು. ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಒಬ್ಬ ಮನುಷ್ಯನಿಗೆ ಹೇಗೆ ಮುಖ್ಯವೋ, ಹಾಗೆಯೇ ಒಬ್ಬ ಕುಂಚಿಟಿಗನಿಗೆ ಈ ಕಾರ್ಡ್‌ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕೆ ಸೂಕ್ತವಾದ ಅಪ್ಲಿಕೇಶನ್ ರೆಡಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮುಂದೆ ಯಾವುದೇ ಸಂಘ-ಸಂಸ್ಥೆಗಳು ಅಥವಾ ಸರ್ಕಾರ ಕುಂಚಿಟಿಗರನ್ನು ನೇರವಾಗಿ ಗುರುತಿಸಿ ಸೌಲಭ್ಯ ಒದಗಿಸಲು ನೆರವಾಗಲಿ ಎಂದು ಇದನ್ನು ರೂಪಿಸಲಾಗುತ್ತಿದೆ. ಸರ್ಕಾರ ಕುಂಚಿಟಿಗರನ್ನು ನೇರವಾಗಿ ಗುರುತಿಸಿ ಯಾವುದೇ ದಾಖಲಾತಿ ಕೇಳದೆ ಐಡೆಂಟಿಟಿ ವೆರಿಫಿಕೇಶನ್ ಮಾಡಬಹುದು. ಇಷ್ಟು ವಿವರ ಇದರಲ್ಲಿ ಅಡಕವಾಗಿರುತ್ತದೆ. ನಿಖರವಾದ ಅಂಕಿ–ಅಂಶದ ದೃಢೀಕರಣ, ಸಮಾಜದ ಅಭಿವೃದ್ಧಿಗೆ ಜನಗಣತಿಯ ಈ ಅಪ್ಲಿಕೇಶನ್ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.