ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಸ ಭಾರತ’ ನಾಟಕ ಯಶಸ್ವಿ

ನಾಟಕಮನೆ ತುಮಕೂರು ವತಿಯಿಂದ ರಂಗ ಗೌರವ
Published 19 ಮೇ 2024, 6:31 IST
Last Updated 19 ಮೇ 2024, 6:31 IST
ಅಕ್ಷರ ಗಾತ್ರ

ತುಮಕೂರು: ನಾಟಕಮನೆ– ತುಮಕೂರು ವತಿಯಿಂದ ನಗರದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮಹಾಕವಿ ಭಾಸನ ನಾಲ್ಕು ನಾಟಕಗಳನ್ನು ಸಂಯೋಗವಿರುವ ‘ಭಾಸ ಭಾರತ’ ರಂಗ ಪ್ರಯೋಗ ಯಶಸ್ವಿಯಾಗಿ ನೆರವೇರಿತು. ನೋಡುಗರ ಗಮನ ಸೆಳೆಯಿತು.

‘ಮಧ್ಯಮ ವ್ಯಾಯೋಗ’, ‘ಧೂತ ಘಟೋತ್ಕಚ’, ‘ಕರ್ಣಭಾರ’ ಮತ್ತು ‘ಊರುಭಂಗ’ ನಾಟಕಗಳನ್ನು ರಂಗಕ್ಕೆ ಸಂಯೋಗಿಸಿಕೊಂಡು ‘ಭಾಸ ಭಾರತ’ ನಾಟಕ ಪ್ರದರ್ಶಿಸಿದರು. ಶಿವು ಹೊನ್ನಿಗನಹಳ್ಳಿ ನಿರ್ದೇಶನದಲ್ಲಿ ನಾಟಕ ಮೂಡಿ ಬಂತು. ಸಂಗೀತ, ವಿಶಿಷ್ಟ ರೀತಿಯ ವೇಷಭೂಷಣ, ರಂಗಸಜ್ಜಿಕೆ, ಕಲಾವಿದರ ನಟನೆಯ ಮೂಲಕ ನಾಟಕವು ಪ್ರೇಕ್ಷಕರನ್ನು ತನ್ನತ್ತ ಸೆಳೆಯಿತು.

ಕಲಾವಿದರಾದ ಶಿವು ಹೊನ್ನಿಗನಹಳ್ಳಿ, ಟಿ.ಪಿ.ರಾಜಣ್ಣ, ಆರ್.ಮಂಜುನಾಥ್, ಎಂ.ಜಿ.ಸೂಲಯ್ಯ, ಆರ್.ವಿಶ್ವನಾಥ್, ಪಿ.ನಾಗರಾಜು ಅವರನ್ನು ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ರಂಗ ಕಲಾವಿದರಾದ ವಸಂತ್‍ಕುಮಾರ್‌, ಎನ್‌.ಆರ್‌.ಪ್ರಕಾಶ್‌, ಎಸ್.ನಾಗಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್‍ಕುಮಾರ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT