ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಗಲಾಪುರ ಗ್ರಾಮಕ್ಕೆ ಬಸ್ ಸಂಚಾರ

Published 16 ಜೂನ್ 2024, 4:41 IST
Last Updated 16 ಜೂನ್ 2024, 4:41 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ಗಡಿಭಾಗ ಕೆಂಗಲಾಪುರ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ‌ಸಂಚರಿಸಿದ್ದು, ಗ್ರಾಮಸ್ಥರು ಬಸ್‌ಗೆ ಪೂಜೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು.

ತಿಪಟೂರು ಮಾರ್ಗವಾಗಿ ಹುಳಿಯಾರು, ಹಂದನಕೆರೆ, ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ದಿನಕ್ಕೆ ಎರಡು ಬಾರಿ ಸಂಚರಿಸಲು ಅವಕಾಶ ಮಾಡಲಾಗಿದೆ. ಈ ಭಾಗದ ನೂರಾರು ವಿದ್ಯಾರ್ಥಿಗಳು ರೈತರು, ಕೂಲಿ ಕಾರ್ಮಿಕರು ಸಂಚರಿಸಲು ಅನುಕೂಲವಾಗಿದೆ. ಕೆಂಗಾಲಾಪುರ ಗ್ರಾಮದಲ್ಲಿ ಹಿಂದುಳಿದ ಸಾಮಾನ್ಯ ಕುಟುಂಬದ 1,400ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು ಗ್ರಾಮಕ್ಕೆ ಬಸ್ ಬಂದಿದ್ದರಿಂದ ಸಂತೋಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT