ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಟಿಪ್ಪರ್‌ ಲಾರಿ– ಬೈಕ್‌ ಡಿಕ್ಕಿ, ಚಕ್ರಕ್ಕೆ ಸಿಲುಕಿ 3 ತಿಂಗಳ ಮಗು ಸಾವು

Published 2 ಏಪ್ರಿಲ್ 2024, 13:17 IST
Last Updated 2 ಏಪ್ರಿಲ್ 2024, 13:17 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಎಂಎಚ್‌ ಪಟ್ಟಣ ಕೆರೆಯ ಸಮೀಪದ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮಂಗಳವಾರ ಬೈಕ್‌ ಮತ್ತು ಟಿಪ್ಪರ್‌ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮೂರು ತಿಂಗಳ ಹೆಣ್ಣು ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.

ಗುಬ್ಬಿ ಪಟ್ಟಣದ ಲೋಕೇಶ್‌ ಹಾಗೂ ಲಕ್ಷ್ಮಿ ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಗುಬ್ಬಿ ಕಡೆಯಿಂದ ತುಮಕೂರಿಗೆ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಎಂ.ಎಚ್‌.ಪಟ್ಟಣ ಕೆರೆಯ ಬಳಿ ಮಣ್ಣು ತುಂಬಿಕೊಂಡು ಬರಲು ಹೋಗುತ್ತಿದ್ದ ಟಿಪ್ಪರ್‌ ಲಾರಿಯು ಏಕಾಏಕಿ ಎಡಗಡೆ ತಿರುಗಿದ್ದರಿಂದ ಬೈಕ್‌ ಲಾರಿಗೆ ಡಿಕ್ಕಿಯಾಗಿದೆ.

ಮಗು ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT