ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಬಳಕೆ: ಮಳಿಗೆ ವಿರುದ್ಧ ಪ್ರಕರಣ

Published 10 ಜನವರಿ 2024, 8:03 IST
Last Updated 10 ಜನವರಿ 2024, 8:03 IST
ಅಕ್ಷರ ಗಾತ್ರ

ತುಮಕೂರು: 13 ವರ್ಷದ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದ ನಗರದ ಎಂ.ಜಿ.ರಸ್ತೆಯ ಎಸ್‌.ಎ.ಬ್ರಿಡಾಲ್‌ ಕ್ರಿಯೇಷನ್‌ ಮಳಿಗೆ ಮತ್ತು ನಾಲ್ವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಮಿಕ ನಿರೀಕ್ಷಕ ನಾಗಭೂಷಣ್‌ ಡಿ. 8ರಂದು ಮಧ್ಯಾಹ್ನ ಅನಿರೀಕ್ಷಿತವಾಗಿ ತಪಾಸಣೆಗೆಂದು ಎಂ.ಜಿ.ರಸ್ತೆಯ ಕಡೆ ಹೋದಾಗ ಮೂರು ಜನ ಮಕ್ಕಳು ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾರ್ವಜನಿಕರನ್ನು ವ್ಯಾಪಾರ ಮಾಡುವಂತೆ ಮಕ್ಕಳು ಕರೆಯುತ್ತಿದ್ದರು. ಅವರನ್ನು ಕರೆದು ವಿಚಾರಿಸಿದಾಗ ಸದರಿ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

‘ಮಳಿಗೆ ಮಾಲೀಕರು ಮಕ್ಕಳ ಮಾಹಿತಿ ನೀಡಲು ನಿಕಾರಿಸಿದರು. ಅವರನ್ನು ಬಾಲ ಮಂದಿರಕ್ಕೆ ಸೇರಿಸಲು ಆಟೊದಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಈ ವೇಳೆ ಎಸ್‌.ಎ.ಬ್ರಿಡಾಲ್‌ ಕ್ರಿಯೇಷನ್‌ ಮಳಿಗೆ ಮತ್ತು ಸುತ್ತಮುತ್ತಲಿನ ಅಂಗಡಿಯವರು ಮಕ್ಕಳನ್ನು ಆಟೊದಿಂದ ಎಳೆದು ನಮ್ಮಿಂದ ಬಲವಂತವಾಗಿ ಬಿಡಿಸಿದರು. ಅವರು ಓಡಿ ಹೋಗುವಂತೆ ಮಾಡಿದ್ದಾರೆ. ಮಕ್ಕಳು ಕೆಲಸ ಮಾಡುತ್ತಿರುವ ಮಳಿಗೆಯ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ನಾಗಭೂಷಣ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT