ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ: ಆರೋಪಿಗಳಿಗೆ ಜಾಮೀನು

Last Updated 4 ನವೆಂಬರ್ 2022, 21:43 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ಜಿಲ್ಲೆಯ ಜಕ್ಕೇನಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಾಲ್ಯ ವಿವಾಹ ನಡೆಸಿದ ಆರೋಪ ಎದುರಿಸುತ್ತಿದ್ದ ಐವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಈ ಸಂಬಂಧ ತುಮಕೂರಿನ ಲಕ್ಷ್ಮಮ್ಮ, ಲಲಿತಾ ಕುಮಾರಿ, ಕಲಾವತಿ, ಕಮಲಮ್ಮ, ಸಾವಿತ್ರಮ್ಮ ಮತ್ತು ಬಡ್ಡಿ ಈರಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಪ್ರಕರಣದ ಪ್ರಮುಖ ಆರೋಪಿಯೂ ಆದ ವರ ಈಗ ಮೃತಪಟ್ಟಿದ್ದಾನೆ ಮತ್ತು ವಧು ನಾಗರತ್ನಮ್ಮ ಅವರ ದಿನಾಂಕವನ್ನು ತನಿಖಾಧಿಕಾರಿ ಖಚಿತಪಡಿಸಿಲ್ಲ. ಅಂತೆಯೇ ನಾಗರತ್ನಮ್ಮನನ್ನು ಮದುವೆಯಾಗಿದ್ದ ಎಂಬ ವಾದವನ್ನು ರುಜುವಾತುಪಡಿಸಲು ಯಾವುದೇ ಸಾಕ್ಷಿ ಇಲ್ಲ’ ಎಂಬ ಕಾರಣದೊಂದಿಗೆ ನ್ಯಾಯಪೀಠ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?: ‘ನಾಗರತ್ನಮ್ಮನಿಗೆ 2016ರ ನವೆಂಬರ್ 20ರಂದು ಮದುವೆ ಮಾಡಿಸಲಾಗಿದೆ. ಈ ದಿನಾಂಕದಂದು ಆಕೆಗೆ 17 ವರ್ಷವಾಗಿತ್ತು’ ಎಂದು ಆರೋಪಿಸಿ ನಾಗರತ್ನಮ್ಮ ಅವರ ಸಂಬಂಧಿ ದೂರು ಸಲ್ಲಿಸಿದ್ದರು. ಇದರನ್ವಯಬಾಲ್ಯವಿವಾಹ ತಡೆ ಕಾಯ್ದೆ-2006ರ ಕಲಂ 9 ಮತ್ತು 10ರ ಅನುಸಾರ ಐವರು ಆರೋಪಿಗಳ ವಿರುದ್ಧ, ‘ಅರ್ಜಿದಾರರು ಮದುವೆಗೆ ಪ್ರಚೋದನೆ ನೀಡಿ ಮದುವೆ ಮಾಡಿದ್ದಾರೆ’ ಎಂದು ದೋಷಾರೋಪ ಹೊರಿಸಲಾಗಿತ್ತು.ಮಧುಗಿರಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT