ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಾದರ ವಿದ್ಯಾರ್ಥಿಗೆ ಅಭಿನಂದನೆ

Last Updated 28 ಫೆಬ್ರುವರಿ 2021, 16:08 IST
ಅಕ್ಷರ ಗಾತ್ರ

ತುಮಕೂರು: ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಜಿಲ್ಲೆಯ ಹಿಂದೂ ಸಾದರ ಸಮುದಾ ಯದಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳ ಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಮೂರ್ತಿ, ‘ಹಿಂದೂ ಸಾದರ ಸಮುದಾಯದ ಬಡವರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಸ್ಥಾಪಿಸಲಾಯಿತು. ಆ ಮೂಲಕ ಸಮುದಾಯದವರಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದರು.

ಕೋವಿಡ್-19 ಸಮಯದಲ್ಲಿ ಟ್ರಸ್ಟ್ ವತಿಯಿಂದ 40 ಜನ ಬಡವರಿಗೆ ₹2 ಸಾವಿರ ಬೆಲೆಯ ಆಹಾರ ಪದಾರ್ಥ
ಗಳನ್ನು ವಿತರಿಸಲಾಯಿತು. ಹಿಂದೂ ಸಾದರ ಸಮಾಜದ ಸ್ಮಶಾನಕ್ಕಾಗಿ ನಗರದಲ್ಲಿ 1 ಎಕರೆ ಜಮೀನು ಖರೀದಿಸಲಾಯಿತು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ‘ನಾವು ಎಷ್ಟೇ ಓದಿದರೂ, ಆರ್ಥಿಕ ಮಟ್ಟ ಎಷ್ಟೇ ಎತ್ತರಕ್ಕೆ ಏರಿದರೂ ಸಂಸ್ಕಾರಯುತವಾಗಿ ಬಾಳಬೇಕು. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅವಕಾಶಗಳನ್ನು ಉತ್ತಮ ಅಭಿಲಾಷೆ
ಯೊಂದಿಗೆ ನಿಮ್ಮದಾಗಿಸಿಕೊಳ್ಳಿ’ ಎಂದು ಸಲಹೆ ಮಾಡಿದರು.

ಗುತ್ತಿಗೆದಾರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ, ‘ಎಸ್‍ಎಸ್‍ಎಲ್‍ಸಿ, ಪಿಯುಸಿ ನಿಮ್ಮ ಜೀವನದ ಪರಿವರ್ತನೆಯ ಘಟ್ಟ. ಈ ಘಟ್ಟ ದಾಟಲು ಅಪಾರ ಪರಿಶ್ರಮದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಸೋಮಾರಿತನ ಮೈಗೂಡಿಸಿಕೊಳ್ಳದೆ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ಗುರಿ ಸಾಧಿಸಬೇಕು’ ಎಂದು ತಿಳಿಸಿದರು.

ಸಹಕಾರ ಇಲಾಖೆ ನಿವೃತ್ತ ಉಪನಿಬಂಧಕ ಮುರಳೀಕೃಷ್ಣ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಶಿವಕುಮಾರ್, ಪರಮಹಂಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡೆಲ್ಟಾ ರವಿಕುಮಾರ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮಧುಗಿರಿ ಎಂ.ಜಿ.ಶ್ರೀನಿವಾಸ್ ಮೂರ್ತಿ, ಕೊರಟಗೆರೆ ಮಲ್ಲಪ್ಪ, ಶಿರಾ ಟಿ.ಎಂ.ನಾಗರಾಜಪ್ಪ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಬಿ.ಆರ್.ರಮೇಶ್, ಕಾರ್ಡಿಯಲ್ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಎಂ.ಕೆ.ನಂಜುಂಡಯ್ಯ, ಕೈಗಾರಿಕೋದ್ಯಮಿ ಸಿ.ರವಿಶಂಕರ್, ಸರೋಜಾರಾಜು, ಬಸವರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT