ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ವಿಷವಾಯ್ತು ಕುಡಿಯುವ ನೀರು

ಕೊಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮತ್ತಷ್ಟು ತೀವ್ರವಾಗುತ್ತಿದೆ ಫೋರೈಡ್ ಅಂಶ
Last Updated 10 ಮೇ 2019, 7:22 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನಲ್ಲಿ ಸತತ ಬರಗಾಲ ಎದುರಾಗಿದೆ. ಇದು ಜನರಿಗೆ ಈಗ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕುಡಿಯಲು ನೀರೇ ಸಿಗದೆ ಹಾಹಾಕಾರದ ಎದುರಾಗಿದೆ.

ಕೆಲ ಕೊಳವೆ ಬಾವಿಗಳಲ್ಲಿ 1 ಸಾವಿರದಿಂದ 1200 ಅಡಿಗಳ ಆಳದಿಂದ ಬರುವ ನೀರನ್ನು ಶುದ್ಧೀಕರಿಸಿ ನೀಡಬೇಕಾಗಿದೆ. ಆದರೆ ಆ ನೀರು ಕೂಡ ಶುದ್ಧೀಕರಣ ಆಗುತ್ತಿಲ್ಲ. ಇದರಿಂದ ಈಗಾಗಲೇ ಹಲವಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚಲಾಗಿದೆ. ಇನ್ನು ಕೆಲವು ಘಟಕಗಳನ್ನು ಮುಚ್ಚಿದರೆ ಜನರು ಗಲಾಟೆ ಮಾಡಬಹುದು ಎಂದು ವಿಧಿಯಿಲ್ಲದೆ ನಡೆಸುತ್ತಿದ್ದಾರೆ. ಆದರೆ ಈ ನೀರು ವಿಷವಾಗುತ್ತಿದೆ.

ಕೊಡಿಗೇನಹಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರಿಲ್ಲದೆ ಕೆಲವನ್ನು ನಿಲ್ಲಿಸಲಾಗಿದೆ. ಇನ್ನು ಕೆಲವು ಘಟಕಗಳಿಗೆ ಬರುವ ನೀರು ಗಡುಸು ನೀರಾಗಿದೆ. ಆ ಕಾರಣಕ್ಕೆ ಘಟಕಗಳು ಬಂದ್ ಆಗುತ್ತಿವೆ. ಸರ್ಕಾರ ನಿಯಮಾವಳಿಗಳ ಪ್ರಕಾರ ನೀರಿನಲ್ಲಿ ಗಡುಸುತನದ ಪ್ರಮಾಣ 1,200 ಇರಬೇಕು. ಆದರೆ ಚಿಕ್ಕಮಾಲೂರು ಗ್ರಾಮ ಪಂಚಾಯಿತಿಗೆ ಸೇರಿರುವ ತಿಗಳರಹಳ್ಳಿ ಗ್ರಾಮದ ಘಟಕದಲ್ಲಿ 3 ಸಾವಿರ ಮತ್ತು ಕಾಳೇನಹಳ್ಳಿ ಗ್ರಾಮದ ಘಟಕದಲ್ಲಿ 2,200 ಇದೆ. ಆ ಕಾರಣಕ್ಕೆ ಇವುಗಳನ್ನು ಮುಚ್ಚಲಾಗಿದೆ.

ತಾಲ್ಲೂಕಿನಲ್ಲಿ ದೊರೆಯುವ ನೀರು ಹೆಚ್ಚು ಆಳದಿಂದ ಬರುತ್ತದೆ. ಆ ನೀರಲ್ಲಿ ಪ್ಲೋರೈಡ್ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಜನರಿಗೆ ಮೈ ಕೈ ನೋವು ಮತ್ತು ಹಲ್ಲುಗಳ ಬಣ್ಣ ಬದಲಾವಣೆ ಆಗುತ್ತದೆ. ನೀರಲ್ಲಿ ಶೇ 70 ಪ್ರಮಾಣದಲ್ಲಿ ಪ್ಲೋರೈಡ್ ಅಂಶ ಇರುವುದರಿಂದ ಆ ನೀರನ್ನು ಫಿಲ್ಟರ್ ಮಾಡಿದರೂ ಅವು ಫಿಲ್ಟರ್ ಆಗುತ್ತಿಲ್ಲ. ಬಲವಂತಕ್ಕೆ ಫಿಲ್ಟರ್ ಮಾಡಲು ಮುಂದಾದರೆ ಯಂತ್ರಗಳು ಕೆಡುತ್ತವೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಕಠಿಣವಾಗಲಿದೆ. ಜನರು ಇನ್ನಾದರೂ ಎಚ್ಚೆತ್ತು ಮಿತವಾಗಿ ನೀರು ಬಳಸಬೇಕು. ಇಲ್ಲದಿದ್ದರೆ ಈ ಭಾಗ ಮತ್ತೊಂದು ಮರಭೂಮಿ ಆ‌ಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಚಿಕ್ಕಮಾಲೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್. ಭಾಸ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT