ಸೋಮವಾರ, ಡಿಸೆಂಬರ್ 9, 2019
20 °C

ಮಟ್ಕಾ; 3 ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತಿಪಟೂರಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚಾಮುಂಡಿ ಮದ್ಯದ ಅಂಗಡಿ ಮತ್ತು ಶೃಂಗಾರ ಹೋಟೆಲ್ ಬಳಿ ದಾಳಿ ನಡೆಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ಮಾವಿನ ತೋಪು ನಿವಾಸಿ ಮನ್ಸೂರ್ (33), ಗಾಂಧಿನಗರದ ರಫೀಕ್ (32), ಪ್ಯಾರಜಾನ್ (42) ಬಂಧಿತರು. ಇವರಿಂದ ₹ 5,600 ನಗದು ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಎಂ.ವಿ.ಶೇಷಾದ್ರಿ ಸಿಬ್ಬಂದಿ ಶಿವಶಂಕರಪ್ಪ, ಪರಮೇಶ್ ಕಾರ್ಯಾಚರಣೆಯ ತಂಡದಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)