ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಪರಿವರ್ತನ ಸಂಘದಿಂದ ಮನೆ ಬಾಗಿಲಿಗೆ ಸೌಲಭ್ಯ

Published 18 ಜೂನ್ 2023, 14:07 IST
Last Updated 18 ಜೂನ್ 2023, 14:07 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಭಾನುವಾರ ಭಾರತೀಯ ಪರಿವರ್ತನ ಸಂಘದ ಪದಾಧಿಕಾರಿಗಳು ಪಿಂಚಣಿ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ತಲುಪಿಸಿದರು.

ಗ್ರಾಮದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ 14 ಮನೆಗಳಿಗೆ ಹೋಗಿ ಆದೇಶ ಪ್ರತಿ ಹಸ್ತಾಂತರಿಸಲಾಯಿತು.

ಬಿಪಿಎಸ್ ಜಿಲ್ಲಾ ಘಟಕದ ಪದಾಧಿಕಾರಿ ಕೆಂಚರಾಯ ಮಾತನಾಡಿ, ತಳ ಸಮುದಾಯದ ವೃದ್ಧರು, ನಿರ್ಗತಿಕರಿಂದ ದಾಖಲಾತಿಗಳನ್ನು ಪಡೆದು ಸಂಬಂಧಿಸಿದ ಕಚೇರಿಗಳಿಗೆ ತಲುಪಿಸಿ, ಸಂಪೂರ್ಣ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಆದೇಶ ಪ್ರತಿ ಬರುವವರೆಗೆ ಕಚೇರಿಗಳಿಗೆ ಓಡಾಡಿ ನಂತರ ಮನೆ ಬಾಗಿಲಿಗೆ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಪಿಂಚಣಿ ಆದೇಶ ಪ್ರತಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದರು.

ತಾಲ್ಲೂಕು ಸಂಯೋಜಕ ಎಚ್.ಡಿ. ಈರಣ್ಣ, ಕಚೇರಿಗಳಿಗೆ ಹೋಗಲಾಗದೆ, ಅರ್ಜಿ ಸಲ್ಲಿಸಲಾಗದೆ ನೂರಾರು ಮಂದಿ ಅರ್ಹ ಫಲಾನುಭವಿಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹವರನ್ನು ಗುರತಿಸಿ ಸೌಲಭ್ಯ ಕಲ್ಪಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳ ಫಲಾನುಭವಿಗಳಿಗೂ ಇದೇ ರೀತಿ ಕೆಲಸ ಮಾಡಿಕೊಡುವ ಯೋಜನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT