ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ| ರಸ್ತೆ ಅಭಿವೃದ್ಧಿಗೆ ಚಾಲನೆ: ಜೆ.ಸಿ. ಮಾಧುಸ್ವಾಮಿ

Last Updated 29 ಮಾರ್ಚ್ 2023, 6:04 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಯಳ್ಳೇನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಒಟ್ಟು ₹ 8.40 ಕೋಟಿ ವೆಚ್ಚದಲ್ಲಿ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದರು.

₹ 55 ಲಕ್ಷ ವೆಚ್ಚದಲ್ಲಿ ಗೌಡನಹಳ್ಳಿ ತೋಟೇಗೌಡನಪಾಳ್ಯದ ರಸ್ತೆ, ₹39.90 ಲಕ್ಷ ವೆಚ್ಚದಲ್ಲಿ ನವಿಲೆ ಬಳಿಯ ಕಾರೇಹಳ್ಳಿ ರಸ್ತೆ, ₹ 25 ಲಕ್ಷದಲ್ಲಿ ಮೇಲನಹಳ್ಳಿ ಬಳಿಯ ರಾಯಪ್ಪನಪಾಳ್ಯ ರಸ್ತೆ, ₹ 46 ಲಕ್ಷದಲ್ಲಿ ಕುಪ್ಪೂರು ಮುಖ್ಯರಸ್ತೆಯಿಂದ ಮೊರಾರ್ಜಿ ಹಾಗೂ ರಾಣಿ ಚನ್ನಮ್ಮ ವಸತಿ ಶಾಲೆವರೆಗಿನ ರಸ್ತೆ, ₹ 71.70 ಲಕ್ಷ ವೆಚ್ಚದಲ್ಲಿ ಯಳ್ಳೇನಹಳ್ಳಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಿದರು.

₹ 40 ಲಕ್ಷದಲ್ಲಿ ಮತಿಘಟ್ಟ ಮುಖ್ಯರಸ್ತೆಯಿಂದ ಫಯಾಜ್ ಸಾಬ್ ಪಾಳ್ಯ ರಸ್ತೆ, ₹ 130 ಲಕ್ಷದಲ್ಲಿ ದವನದ ಹೊಸಹಳ್ಳಿಯಿಂದ ಬಂದ್ರೆಹಳ್ಳಿ ತಾಂಡಾದವರೆಗೆ ರಸ್ತೆ, ₹ 125 ಲಕ್ಷ ವೆಚ್ಚದಲ್ಲಿ ಹಂದನಕೆರೆ ಚೌಳಕಟ್ಟೆ ರಸ್ತೆಯಿಂದ ರಾಮಲಿಂಗನಪಾಳ್ಯ ರಸ್ತೆ, ₹ 60 ಲಕ್ಷದಲ್ಲಿ ನಿರುವಗಲ್ ಗೊಲ್ಲರಹಟ್ಟಿ ರಸ್ತೆ, ₹ 31 ಲಕ್ಷದಲ್ಲಿ ತಿಪಟೂರು ಮುಖ್ಯರಸ್ತೆಯಿಂದ ಲಕ್ಷ್ಮೀಪುರ ಬಸವೇಶ್ವರ ನಗರದವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ₹ 125 ಲಕ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ 234ರಿಂದ ಕುರಿಹಟ್ಟಿ ಮೂಲಕ ಕಂಪನಹಳ್ಳಿ ತೋಟದ ಮನೆಯವರೆಗೆ ರಸ್ತೆ, ₹ 75 ಲಕ್ಷದಲ್ಲಿ ಬರಕನಹಾಳ್‌ನಿಂದ ಸಂಗೇನಹಳ್ಳಿವರೆಗೆ ರಸ್ತೆ, ₹ 50 ಲಕ್ಷದಲ್ಲಿ 150ಎ ರಸ್ತೆಯಿಂದ ಕಲ್ಲಹಳ್ಳಿವರೆಗೆ ರಸ್ತೆ ಹಾಗೂ ₹ 71.70 ಲಕ್ಷದಲ್ಲಿ ಯಳ್ಳೇನಹಳ್ಳಿಯ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT