ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಹಬ್ಬದ ಸಂಭ್ರಮ

Last Updated 26 ಮೇ 2020, 1:58 IST
ಅಕ್ಷರ ಗಾತ್ರ

ತುಮಕೂರು: ಶಿರಾ, ಕೊರಟಗೆರೆ, ಗುಬ್ಬಿ, ಮಧುಗಿರಿ, ಕುಣಿಗಲ್‌, ಪಾವಗಡ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಈದ್– ಉಲ್– ಫಿತ್ರ್ ಹಬ್ಬವನ್ನು ಮುಸ್ಲಿಮರು ಮನೆಗಳಲ್ಲಿಯೇ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಿದ್ದ ಕಾರಣ ತಮ್ಮ ಮನೆಗಳಲ್ಲೆ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿದರು.

ಪ್ರತಿ ವರ್ಷ ರಂಜಾನ್ ಮಾಸ ಬಂತೆಂದರೆ ಇನ್ನಿಲ್ಲದ ಸಡಗರ, ಸಂಭ್ರಮದಿಂದ ಮನೆ ಮಾಡುತ್ತಿತ್ತು. ಹಬ್ಬದ ಅಂಗವಾಗಿ ಬಟ್ಟೆ, ಇನ್ನಿತರೆ ವಸ್ತುಗಳನ್ನು ರಂಜಾನ್ ತಿಂಗಳು ಪೂರ್ತಿ ಕೊಂಡುಕೊಳ್ಳುತ್ತಿದ್ದರು. ಆದರೆ ಈ ಎಲ್ಲ ಚಟುವಟಿಕೆಗಳಿಗೆ ಈ ಬಾರಿ ಲಾಕ್‌ಡೌನ್ ಕಡಿವಾಣ ಹಾಕಿದೆ.

ಈದ್ಗಾ ಮೈದಾನದಲ್ಲಿ ಪಾರ್ಥನೆಗಾಗಿ ಸಾವಿರಾರು ಮಂದಿ ಸೇರುತ್ತಿದ್ದರು. ಆದರೆ, ಈ ಬಾರಿ ಈದ್ಗಾ ಮೈದಾನಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

‘ಈ ಬಾರಿ ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸಿದೆವು. ಈ ಹಬ್ಬದಲ್ಲಿ ಹಿಂದೂ ಸ್ನೇಹಿತರು ಕೂಡ ಮನೆಗೆ ಬಂದು ಹಬ್ಬಕ್ಕೆ ಜತೆಗೂಡುತ್ತಿದ್ದರು. ಆದರೆ, ಈ ಬಾರಿ ಯಾರೂ ಕೂಡ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿಲ್ಲ. ಸ್ನೇಹಿತರು, ನೆಂಟರೊಂದಿಗೆ ಆಚರಿಸುತ್ತಿದ್ದ ಹಬ್ಬಕ್ಕೆ ಲಾಕ್‌ಡೌನ್ ಮಂಕು ಕವಿದಿದೆ’ ಎಂದರು ಕೊರಟಗೆರೆಯ ಅಶ್ವಕ್ ಹುಸೇನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT