ಬೆಳಿಗ್ಗೆ 6ರಿಂದ ಮಾಕ್ ಪೋಲ್ ಆರಂಭ: ಸಹಾಯಕ ಚುನಾವಣಾ ಅಧಿಕಾರಿ ಬಿ.ಕೃಷ್ಣಪ್ಪ

ಭಾನುವಾರ, ಏಪ್ರಿಲ್ 21, 2019
26 °C

ಬೆಳಿಗ್ಗೆ 6ರಿಂದ ಮಾಕ್ ಪೋಲ್ ಆರಂಭ: ಸಹಾಯಕ ಚುನಾವಣಾ ಅಧಿಕಾರಿ ಬಿ.ಕೃಷ್ಣಪ್ಪ

Published:
Updated:

ಪಾವಗಡ: ತಾಲ್ಲೂಕಿನಾದ್ಯಂತ ಏ. 18ರಂದು ಬೆಳಿಗ್ಗೆ 6ಕ್ಕೆ ಲೋಕಸಭೆ ಚುನಾವಣೆಯ ಮಾಕ್ ಪೋಲ್ ಆರಂಭವಾಗುತ್ತದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಬಿ.ಕೃಷ್ಣಪ್ಪ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತ 246 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,01,392 ಪುರುಷ, 96,317 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,97,714 ಮತದಾರರಿದ್ದಾರೆ. ಮಾಕ್ ಪೋಲ್ ನಂತರ ಬೆಳಿಗ್ಗೆ 7ರಿಂದ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಲಿದೆ. ಸಂಜೆ 6ಕ್ಕೆ ಮತದಾನ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಕಾರ್ಯಕ್ಕೆ 1184 ಮತಗಟ್ಟೆ ಅಧಿಕಾರಿಗಳು, ಒಬ್ಬರು ಡಿಎಸ್‌ಪಿ, ಮೂವರು ಇನ್‌ಸ್ಪೆಕ್ಟರ್, 9 ಮಂದಿ ಸಬ್ಇನ್‌ಸ್ಪೆಕ್ಟರ್ ಸೇರಿದಂತೆ 425 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ಬುಧವಾರ ಎಲ್ಲ ಸಿಬ್ಬಂದಿ ಮತಗಟ್ಟೆಗಳಿಗೆ ತಲುಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !