ನೇಮಕಾತಿ ಇಲ್ಲದೆ ನಿರುದ್ಯೋಗ

7
ಆಶಾ ಕಾರ್ಯಕರ್ತೆಯರ ತಾಲ್ಲೂಕು ಸಮಾವೇಶದಲ್ಲಿ ಎಸ್.ಎನ್‌.ಸ್ವಾಮಿ ಹೇಳಿಕೆ

ನೇಮಕಾತಿ ಇಲ್ಲದೆ ನಿರುದ್ಯೋಗ

Published:
Updated:
Deccan Herald

ತುಮಕೂರು: ಆಶಾ ತಾಯಂದಿರು ಸಮಾಜದ ಆರೋಗ್ಯ ಕಾಪಾಡಲು ಅವಿರತ ಸೇವೆಯ ಪರಿಣಾಮವಾಗಿ ಗರ್ಭಿಣಿಯರ ಸಾವಿನ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಸಂಘಟಕ ಎಸ್.ಎನ್.ಸ್ವಾಮಿ ತಿಳಿಸಿದರು.

ನಗರದ ಐಎಂಎ ಸಭಾಂಗಣದಲ್ಲಿ ಎಐಯುಟಿಯುಸಿ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಎಲ್ಲಾ ಕಾರ್ಮಿಕ ಹೋರಾಟಕ್ಕೆ ಮಾದರಿಯಾಗಿದ್ದಾರೆ ಎಂದರು.

ಆಶಾಗಳು ಇಂದು ಗೌರವಕ್ಕೆ ಪಾತ್ರರಾಗಿದ್ದು ಅವರ ಒಗ್ಗಟ್ಟನ್ನು ತೋರಿಸುತ್ತಿದೆ. ಜೊತೆಗೆ ಎಷ್ಟೇ ಹೋರಾಟ ಮಾಡಿದರೂ ಸಹ ಸಮಸ್ಯೆಗಳು ಇದ್ದೇ ಇವೆ ಎಂದು ಹೇಳಿದರು.

ಎಲ್ಲಾ ರಂಗದಲ್ಲೂ ನೇಮಕಾತಿಗಳಿಲ್ಲದೇ ನಿರುದ್ಯೋಗ ತಾಂಡವವಾಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣದ ಖರ್ಚುಗಳಿಗೆ ಹಣವನ್ನು ಹೊಂದಿಸಲು ಪರದಾಡುತ್ತಿದ್ದಾರೆ. ಇಂತಹ ಜನವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಕಟ್ಟುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಹಾಗಾಗಿ ಮುಂದಿನ ಹೋರಾಟಗಳಿಗೆ ಮುಂದಾಗಬೇಕು ಎಂದು ಹೇಳಿದರು.

ಆಶಾ ಸಂಘಟನೆಯ ಸಂಘಟಕಿ ಮಂಜುಳಾ ಗೋನವಾರ ಅವರು ಮಾತನಾಡಿ, ’ಆಶಾ ಕಾರ್ಯಕರ್ತೆಯರು ಕಳೆದ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಅವರಿಗೆ ಕನಿಷ್ಠ ಗೌರವಧವನ್ನು ಹೆಚ್ಚಿಸದೇ ಆಶಾಗಳಿಂದ ಕೆಲಸವನ್ನು ಮಾಡಿಕೊಳ್ಳುತ್ತಾರೆಯೇ ಹೊರತು ಅವರ ದುಡಿಮೆಗೆ ಪ್ರತಿಫಲವಿಲ್ಲ’ ಎಂದು ಆಕ್ರೋಶಗೊಂಡರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪದ್ಮರೇಖಾ, ಸಂಘಟನಕಾರರಾದ ಅಶ್ವಿನಿ, ಎಐಎಂಎಸ್‌ಎಸ್‌ನ ಸಂಘಟನಾಕಾರರಾದ ರತ್ನಮ್ಮ ಹಾಗೂ ಕಲ್ಯಾಣಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !