ಮಾಜಿ ಮೇಯರ್ ಕೊಲೆ ಪ್ರಕರಣ;  ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

7

ಮಾಜಿ ಮೇಯರ್ ಕೊಲೆ ಪ್ರಕರಣ;  ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

Published:
Updated:

ತುಮಕೂರು: ಮಹಾನಗರ ಪಾಲಿಕೆ ಸದಸ್ಯ ರವಿಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ತನಿಖಾ ತಂಡದ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಂದೂರು ರಾಜೇಶ್ ಎಂಬುವನಿಗೆ ಗುಂಡು ಹಾರಿಸಿದ್ದಾರೆ.

ತಾಲ್ಲೂಕಿನ ಕೋರಾ ಹೋಬಳಿಯ ಲಿಂಗದಹಳ್ಳಿ ಅರಣ್ಯದಲ್ಲಿ ಆರೋಪಿ ಇದ್ದಾನೆ ಎಂಬ ಸುಳಿವಿನ ಮೇರೆಗೆ ಆರೋಪಿ ಬಂಧಿಸಲು ತನಿಖಾ ತಂಡ ಕಾರ್ಯಾಚರಣೆಗೆ ಇಳಿದಾಗ ಘಟನೆ ನಡೆದಿದೆ.

ಕೋರಾ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರವಿಕುಮಾರ್ ಅವರು ಹಿಡಿದುಕೊಳ್ಳಲು ಹೋದಾಗ ಆರೋಪಿಯು  ಕಲ್ಲಿನಿಂದ ಹೊಡೆದಿದ್ದಾನೆ. ಪಿಸ್ತೂಲ್ ಕಸಿದುಕೊಳ್ಳಲು ಯತ್ನಿಸಿದಾಗ ತುಮಕೂರು ಡಿಎಸ್ಪಿ ಕೆ.ಎಸ್.ನಾಗರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಇನ್‌ಸ್ಪೆಕ್ಟರ್ ರವಿಕುಮಾರ್ ಹಾಗೂ ಆರೋಪಿ ರಾಜೇಶ್‌ನನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !