ತುಮಕೂರು: ಚಾಮರಾಜನಗರದಲ್ಲಿ ಫುಡ್ ಪಾರ್ಕ್ ಸ್ಥಾಪನೆಗೆ ಎಲ್ಲ ರೀತಿಯ ಸೌಕರ್ಯ ಒದಗಿಸಲಾಗುವುದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಬುಧವಾರ ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಇಂಡಿಯಾ ಫುಡ್ ಪಾರ್ಕ್ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.

‘ಆ ಭಾಗದಲ್ಲಿ ಸಾಂಬಾರ್ ಪದಾರ್ಥ ಬಜೆ,ಅರಿಷಿಣ, ಶುಂಠಿ ಬೆಳೆಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅಲ್ಲಿನ ಬೆಳೆಗಾರರು ಕೊಯಮತ್ತೂರಿಗೆ ಹೋಗಿ ಶೀತಲಗೃಹಗಳಲ್ಲಿ (ಕೋಲ್ಡ್ ಸ್ಟೋರೇಜ್) ಉತ್ಪನ್ನಗಳನ್ನು ಇಡುತ್ತಿದ್ದಾರೆ. ಫುಡ್ ಪಾರ್ಕ್ ಸ್ಥಾಪನೆ ಮಾಡಲು ಅಗತ್ಯ ಅನುಕೂಲಗಳನ್ನು ಒದಗಿಸಲಾಗುವುದು. ನೀರು, ವಿದ್ಯುತ್ ಸೇರಿ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಿಕೊಡಲಾಗುವುದು’ ಎಂದು ಸಚಿವರು, ಫುಡ್ ಪಾರ್ಕ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಮಾಕನ್‌ಗೆ ಮನವರಿಕೆ ಮಾಡಿದರು.

ಫುಡ್ ಪಾರ್ಕ್‌ಗಳ ನಿರ್ವಹಣೆಗೆ ಮುಖ್ಯವಾಗಿ ಯಥೇಚ್ಛ ನೀರು, ವಿದ್ಯುತ್ ಅವಶ್ಯ. ಅವುಗಳನ್ನು ಒದಗಿಸಲು ಸರ್ಕಾರವೇ ಭರವಸೆ ನೀಡುತ್ತಿರುವುದು ಸ್ವಾಗತಾರ್ಹ. ಈ ದಿಶೆಯಲ್ಲಿ ಚಿಂತನೆ ಮಾಡಲಾಗುವುದು ಎಂದು ಮಾಕನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.