ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SBI ಹೆಸರಲ್ಲಿ ವಂಚನೆ: ‘ಮಿಸ್ಡ್‌ ಕಾಲ್‌’ ಕೊಟ್ಟು ₹10 ಲಕ್ಷ ಕಳೆದುಕೊಂಡ ವ್ಯಕ್ತಿ

Published 18 ಜನವರಿ 2024, 6:43 IST
Last Updated 18 ಜನವರಿ 2024, 6:43 IST
ಅಕ್ಷರ ಗಾತ್ರ

ತುಮಕೂರು: ಸೈಬರ್‌ ಕಳ್ಳರು ಪಾನ್‌ಕಾರ್ಡ್‌ ಅಪ್‌ಡೇಟ್‌ ಮಾಡುವುದಾಗಿ ನಂಬಿಸಿ ನಗರದ ಜಯನಗರ ನಿವಾಸಿ ಮೋಹನ್‌ಕುಮಾರ್‌ ಎಂಬುವರಿಗೆ ₹10 ಲಕ್ಷ ವಂಚಿಸಿದ್ದಾರೆ.

ಜ. 15ರಂದು ಅಪರಿಚಿತ ನಂಬರ್‌ನಿಂದ ಪಾನ್‌ಕಾರ್ಡ್‌ ಅಪ್‌ಡೇಟ್‌ ಮಾಡಿ ಎಂದು ಲಿಂಕ್‌ ಕಳುಹಿಸಿದ್ದಾರೆ. ಮೋಹನ್‌ಕುಮಾರ್‌ ಸದರಿ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಎಸ್‌ಬಿಐ ಖಾತೆ ಸಂಖ್ಯೆ, ಪಾನ್‌ಕಾರ್ಡ್‌ ನಂಬರ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ‘ಎಸ್‌ಬಿಐ ಬ್ಯಾಂಕ್‌ನಿಂದ ಮಾತನಾಡುತ್ತಿರುವುದು, ನಿಮ್ಮ ಮಾಹಿತಿ ಅಪ್‌ಡೇಟ್‌ ಮಾಡಲು 10 ನಿಮಿಷ ಬೇಕಾಗುತ್ತದೆ. ನಂತರ ನಿಮಗೆ ಮೆಸೇಜ್‌ ಬರುತ್ತದೆ. ಅದರಲ್ಲಿನ ನಂಬರ್‌ಗೆ ಮಿಸ್ಡ್‌ ಕಾಲ್‌ ಕೊಡಿ’ ಎಂದು ತಿಳಿಸಿದ್ದಾನೆ.

ಮೋಹನ್‌ಕುಮಾರ್‌ ಅಪರಿಚಿತ ವ್ಯಕ್ತಿ ಹೇಳಿದಂತೆ ಮೆಸೇಜ್‌ನಲ್ಲಿದ್ದ ನಂಬರ್‌ಗೆ ಮಿಸ್ಡ್‌ ಕಾಲ್‌ ಮಾಡಿದ್ದಾರೆ. ನಂತರ ಅವರ ಗಮನಕ್ಕೆ ಬಾರದೆ ಎಸ್‌ಬಿಐ ಬ್ಯಾಂಕ್‌ನ ಉಳಿತಾಯ ಖಾತೆಯಿಂದ ಸೈಬರ್‌ ಕಳ್ಳರು ಹಂತ ಹಂತವಾಗಿ ₹10 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ. ಮೋಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ, ಹಣ ವಾಪಸ್‌ ಕೊಡಿಸುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT