ಗಂಗಾಕಲ್ಯಾಣ: 67 ಫಲಾನುಭವಿಗಳಿಗೆ ಮೋಟರ್ ವಿತರಣೆ

7

ಗಂಗಾಕಲ್ಯಾಣ: 67 ಫಲಾನುಭವಿಗಳಿಗೆ ಮೋಟರ್ ವಿತರಣೆ

Published:
Updated:
Deccan Herald

ತುಮಕೂರು: ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ರೈತರಿಗೆ ಸಮಪರ್ಕಕವಾಗಿ ತಲುಪಿಸಬೇಕು. ಅವರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಶಾಸಕ ಡಿ.ಸಿ.ಗೌರಿಶಂಕರ್ ಸೂಚಿಸಿದರು.

ಗೂಳೂರಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ದೇವರಾಜು ಅರಸು ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಮೋಟರ್ ಹಾಗೂ ಸಲಕರಣೆ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮಾಂತರ ಜನರ ಸಮಸ್ಯೆಗಳನ್ನು ಆಲಿಸಲು ತಿಂಗಳಿಗೆ ಒಮ್ಮೆ ಜನತಾ ದರ್ಶನ ನಡೆಸಲಾಗುವುದು. ಗಂಗಾಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವವರ ಪಟ್ಟಿಯನ್ನು ತಯಾರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

67 ಫಲಾನುಭವಿಗಳಿಗೆ ಸಾಮಗ್ರಿ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !