ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ಗಳಲ್ಲಿ ಶುಭ ಶುಕ್ರವಾರದ ಪ್ರಾರ್ಥನೆ

Last Updated 19 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ತುಮಕೂರು: ಕ್ರೈಸ್ತ ಸಮುದಾಯದವರಿಗೆ ಪವಿತ್ರ ದಿನವಾದ ಶುಭ ಶುಕ್ರವಾರದ (ಗುಡ್ ಫ್ರೈಡೆ) ಅಂಗವಾಗಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಚರ್ಚ್ ಗಳಲ್ಲಿ ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳು ನಡೆದವು.

ನಗರದ ಲೂರ್ದ್ ಮಾತಾ ಚರ್ಚ್, ಸಿಎಸ್‌ಐ ವೆಸ್ಲಿ ಚರ್ಚ್ ಸೇರಿದಂತೆ ನಗರ ವಿವಿಧ ಬಡಾವಣೆಯಲ್ಲಿರುವ ಚರ್ಚ್‌ಗಳಲ್ಲಿ ಶುಭ ಶುಕ್ರವಾರ ಆಚರಣೆ ನಡೆಯಿತು.

‘ಈ ದಿನವು ಏಸುವನ್ನು ಶಿಲುಬೆಗೇರಿಸಿದ ಮತ್ತು ಕಲ್ವರಿನಲ್ಲಿ ಅವರ ಸಾವಿನ ದಿನವನ್ನು ನೆನಪಿಸುತ್ತದೆ. ಉಪವಾಸ, ಪ್ರಾರ್ಥನೆ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತೇವೆ. ಅಪಾರ ನೋವನ್ನು ಉಂಟು ಸಾವಿನ ಸಮಯದಲ್ಲಿ ಅದಕ್ಕೆ ಬದ್ಧನಾಗಿ ನಿಂತು, ತನ್ನ ಸ್ಥಿತಿಗೆ ಕಾರಣರಾದವರನ್ನು ಕ್ಷಮಿಸಿ, ಶಾಂತಿದೂತನಾದ ಏಸುವಿನ ನಡೆಗೆ, ಮಾನವೀಯ ಆಯಾಮವಿದೆ. ಜಾತಿ, ಧರ್ಮ ಮೀರಿದ ಆಯಾಮ ಈ ದಿನಕ್ಕಿದೆ’ ಎಂದು ಫಾದರ್‌ಗಳು ಶುಭ ಶುಕ್ರವಾರದ ಮಹತ್ವ ನುಡಿದರು.

ಸಮಾಜದಲ್ಲಿ ನಿರಂತರವಾಗಿ ಸುಖ, ಶಾಂತಿ ನೆಲೆಸಲು ಪ್ರತಿಯೊಬ್ಬರು ಸಹೋದರತ್ವ ಭಾವನೆಯಿಂದ ಜೀವನ ನಡೆಸಬೇಕು ಎಂದು ಸಂದೇಶವನ್ನು ಫಾದರ್‌ಗಳು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT