ಭಾನುವಾರ, ಸೆಪ್ಟೆಂಬರ್ 15, 2019
23 °C

ದೋಬಿಘಾಟ್ ಹತ್ತಿರ ಸರಗಳ್ಳತನ

Published:
Updated:

ತುಮಕೂರು: ನಗರದ ದೋಬಿಘಾಟ್ ಹತ್ತಿರ ಭಾನುವಾರ ಸಂಜೆ ದುಷ್ಕರ್ಮಿ ಮಾಂಗಲ್ಯ ಸರ ದೋಚಿದ್ದಾನೆ.

ಅಶೋಕನಗರ 8ನೇ ಕ್ರಾಸ್‌ ನಿವಾಸಿ ಉಮಾದೇವಿ ಸರ ಕಳೆದುಕೊಂಡವರು. ಸಂಜೆ ದೋಬಿಘಾಟ್ ಪಕ್ಕದ ಪಾರ್ಕ್‌
ನಲ್ಲಿ ಮೊಮ್ಮಗ ಮತ್ತು ನಾಯಿ ಮರಿಯೊಂದಿಗೆ ಬಂದಿದ್ದರು. ಮೊಮ್ಮಗ ನನ್ನು ಆಡಿಸುತ್ತಿದ್ದಾಗ ದುಷ್ಕರ್ಮಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ ಯಾಗಿದ್ದಾನೆ. ₹ 1.65 ಲಕ್ಷ ಮೊತ್ತದ ಸರ ದೋಚಲಾಗಿದೆ ಎಂದು ಉಮಾದೇವಿ ಅವರು ಹೊಸಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.

Post Comments (+)