ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಹಿಂದ ನಾಯಕನ ವಿರುದ್ಧ ರಾಜಕೀಯ ಪಿತೂರಿ

Published : 19 ಆಗಸ್ಟ್ 2024, 14:00 IST
Last Updated : 19 ಆಗಸ್ಟ್ 2024, 14:00 IST
ಫಾಲೋ ಮಾಡಿ
Comments

ಚಿಕ್ಕನಾಯಕನಹಳ್ಳಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ವಿರುದ್ಧ ಚಿಕ್ಕನಾಯಕನಹಳ್ಳಿ-ಹುಳಿಯಾರು ಬ್ಲಾಕ್ ಕಾಂಗ್ರೆಸ್‌ನಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ನೇತೃತ್ವದಲ್ಲಿ ಪಟ್ಟಣದ ನೆಹರೂ ಸರ್ಕಲ್‌ನಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ಪಕ್ಷಪಾತ ಧೋರಣೆ ಖಂಡಿಸಲಾಯಿತು. 

ಕೆ.ಎಸ್.ಕಿರಣ್ ಕುಮಾರ್, ಬಿಜೆಪಿಯ ಹಲವು ಹಿರಿಯ ನಾಯಕರ ವಿರುದ್ಧ ಲೋಕಾಯುಕ್ತದಲ್ಲಿ ದೂರುಗಳು ದಾಖಲಾದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಿಲ್ಲ. ಆದರೆ, ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿ ವಿರುದ್ಧ ಹುನ್ನಾರ ಸೃಷ್ಟಿಸಿರುವುದು ರಾಜಕೀಯ ದುರದ್ದೇಶದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಚಂದ್ರಶೇಖರ್, ಅಹಿಂದ ವರ್ಗಗಳ ಪ್ರಬಲ ನಾಯಕನಾಗಿ ಬೆಳೆದಿರುವ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಅಸಮಾಧಾನ ವ್ಯಕ್ತಪ‍ಡಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಚಿಕ್ಕಣ್ಣ, ಕೃಷ್ಣೇಗೌಡ, ನಾರಾಯಣಗೌಡ, ಮೊಹಮ್ಮದ್ ಸಜ್ಜಾದ್, ಬೇವಿನಹಳ್ಳಿ ಚನ್ನಬಸವಯ್ಯ, ನರಸಿಂಹಮೂರ್ತಿ, ವಕೀಲ ಪರಮೇಶ್ವರ ನಾಯ್ಕ್, ರಾಜು ಬಡಗಿ, ಕಂಪನಹಳ್ಳಿ ಗೌಸ್ ಪೀರ್, ಸಾಸಲು ಮಂಜುನಾಥ್, ಬೀರಪ್ಪ, ಸೈಯದ್ ಪೀರ್, ಗಂಗಾಧರ್ ಸಿ.ಎಚ್, ಜಾಫರ್ ಹೊನ್ನೆಬಾಗಿ, ಲಕ್ಷ್ಮಿದೇವಿ, ಜಾವೇದ್ ಪಾಷಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT